Download Our App

Follow us

Home » ಅಪರಾಧ » ಅಸಲಿ ಬಂಗಾರ ಅಡು ಇಟ್ಟವನಿಗೆ ನಕಲಿ ಬಂಗಾರ ಎಂದು ಕೇಸ್ ಜಡಿದ ಕೆನರಾ ಬ್ಯಾಂಕ. ಜನತಾ ದರ್ಶನಕ್ಕೆ ಬಂದ ಬ್ಯಾಂಕ್ ಚೀಟಿಂಗ್ ಕೇಸ್.

ಅಸಲಿ ಬಂಗಾರ ಅಡು ಇಟ್ಟವನಿಗೆ ನಕಲಿ ಬಂಗಾರ ಎಂದು ಕೇಸ್ ಜಡಿದ ಕೆನರಾ ಬ್ಯಾಂಕ. ಜನತಾ ದರ್ಶನಕ್ಕೆ ಬಂದ ಬ್ಯಾಂಕ್ ಚೀಟಿಂಗ್ ಕೇಸ್.

ನವಲಗುಂದ ಕೆನರಾ ಬ್ಯಾಂಕ, ಗ್ರಾಹಕನಿಗೆ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ರೈತ ಈರಣ್ಣ ಅಂಗಡಿ ಬಂಗಾರ ಅಡವಿಟ್ಟು, 14 ಲಕ್ಷ 55 ಸಾವಿರ ರೂಪಾಯಿ ಸಾಲ ಪಡೆದಿದ್ದ. ಈರಣ್ಣ, ಬಂಗಾರ ಅಡುವಿಟ್ಟ ಸಂದರ್ಭದಲ್ಲಿ ಕೆನರಾ ಬ್ಯಾಂಕ ಸಿಬ್ಬಂದಿ, ಬಂಗಾರದ ಪರಿಶುದ್ದಿಕರಣ ಮಾಡಿತ್ತು. ಬಂಗಾರ ಅಸಲಿ ಇದೆ ಅನ್ನೋದು ದೃಡೀಕರಣವಾದ ಮೇಲೆ ಸಾಲ ಕೊಟ್ಟಿತ್ತು.

ಆದರೆ, ನವಲಗುಂದದ ಕೆನರಾ ಬ್ಯಾಂಕ ಇದೀಗ, 7 ತಿಂಗಳ ನಂತರ ಅಡವಿಟ್ಟ ಬಂಗಾರ ನಕಲಿ ಎಂದು ಹೇಳಿ ಶಾನವಾಡ ಗ್ರಾಮದ ಈರಣ್ಣ ಅಂಗಡಿ ಎಂಬ ರೈತನ ಮೇಲೆ, ವಂಚನೆ ಕೇಸ್ ಜಡಿದಿದೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಿಸಿದೆ. ಬ್ಯಾಂಕ ಸಿಬ್ಬಂದಿ ವಂಚನೆ ಪ್ರಕರಣ ಧಾಖಲು ಮಾಡಿದ್ದರಿಂದ ನೊಂದ ರೈತ ಜನತಾ ದರ್ಶನದಲ್ಲಿ ತಣ್ಣ ಗೋಳು ತೋಡಿಕೊಂಡಿದ್ದಾನೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ರುದ್ರೇಶ್ ಘಾಳಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ, ರುದ್ರೇಶ ಘಾಳಿಯವರನ್ನು ನೇಮಕ ಮಾಡಲಾಗಿದೆ.  ಪಾಲಿಕೆ ಆಯುಕ್ತರಾಗಿದ್ದ ಡಾ. ಈಶ್ವರ ಉಳ್ಳಾಗಡ್ಡಿಯವರನ್ನು ಬೆಳಗಾವಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ

Live Cricket

error: Content is protected !!