ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರದ ಮೇಲೆ ತಾವೇ ಬಾಂಬ್ ಹಾಕಿ, ಅದನ್ನು ಮುಸ್ಲಿಂ ರ ತಲೆಗೆ ಕಟ್ಟಲು ಬಿಜೆಪಿಯವರು ಹೇಸುವದಿಲ್ಲ ಎಂದು ಆಳಂದ ಶಾಸಕ ಬಿ ಆರ್ ಪಾಟೀಲ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ವಾರ್ತಾ ಭಾರತಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿರುವ ಬಿ ಆರ್ ಪಾಟೀಲ್ ರ ವಿಡಿಯೋವನ್ನು ಬಿಜೆಪಿ ಸಾಮಾಜಿಕ ಜಾಲತಾಣ X ( ಟ್ವಿಟರ್ ) ದಲ್ಲಿ ಹಾಕಿದೆ. ಕಾಂಗ್ರೆಸ್ಸಿನವರ ಕಣ್ಣು ಈಗಲೇ ಅಯೋಧ್ಯೆಯ ರಾಮ ಮಂದಿರದ ಮೇಲೆ ಬಿದ್ದಿದೆ ಎಂದು ಹೇಳಿದೆ.