ವಿಶ್ವದೆಲ್ಲೆಡೆ ಇಂದು ಈದ್ ಮಿಲಾದ್ ಆಚರಿಸಲಾಗುತ್ತಿದೆ. ಪ್ರವಾದಿ ಮೊಹಮ್ಮದ ಪೈಗಂಬರರ್ ಜನ್ಮದಿನವನ್ನು ಶೃದ್ದಾ ಸಡಗರದಿಂದ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ, ಸಚಿವ ಸಂತೋಷ ಲಾಡ್, ಶಾಸಕ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ, ಎನ್ ಎಚ್ ಕೋನರೆಡ್ಡಿ, ಶ್ರೀನಿವಾಸ ಮಾನೆ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ರಕ್ಷಾ ರಾಮಯ್ಯ, ವಿನೋದ ಅಸೂಟಿ, ಅಲ್ತಾಫ್ ಹಳ್ಳೂರ, ಅನೀಲ್ ಪಾಟೀಲ್, ಯುವ ಕಾಂಗ್ರೆಸ್ ಮುಖಂಡ ದೇಸಾಯಿ, ಫೈರೋಜ್ ಪಠಾಣ, ಎಮ್ ಕೆ ನಿಪ್ಪಾಣಿ, ನಾಗರಾಜ ಗೌರಿ, ವಿಜಯ ಕುಲಕರ್ಣಿ, ಬಂಗಾರೇಶ ಹಿರೇಮಠ, ಬಾಪುಗೌಡ ಪಾಟೀಲ್, ಪಿ ಎಚ್ ನೀರಲಕೇರಿ, ರಾಬರ್ಟ್ ದದ್ದಾಪುರಿ, ಚಂಬಣ್ಣ ಹಾಳದೋಟರ, ಬಸವರಾಜ ಮಲಕಾರಿ ಸೇರಿದಂತೆ ಹಲವು ಗಣ್ಯರು ಈ ಮಿಲಾದ್ ಹಬ್ಬದ ಶುಭಾಶಯ ಕೋರಿದ್ದಾರೆ.
ಪ್ರವಾದಿ ಮೊಹಮ್ಮದ ಪೈಗಂಬರ್ ಅವರ ಕೆಲವು ಸಂದೇಶಗಳು
# ಒಂದು ವೇಳೆ ಸ್ವಂತ ಮಗಳು ಕೂಡ ಕಳ್ಳತನ ಮಾಡಿದರೆ ಕೈ ಕಡಿಯಿರಿ ಎಂದು ಹೇಳಿದ “ನ್ಯಾಯಾಧೀಶ”
# ಬಡ್ಡಿ ಶೋಷಣೆಯಾಗಿದೆ ಬಡ್ಡಿ ಕೊಡುವವನು ತೆಗೆದುಕೊಳ್ಳುವವನು ಅದಕ್ಕೆ ಜಾಮೀನು ನಿಲ್ಲುವವನು ಸಮಾನ ಪಾಪಿ ಎಂದು ಹೇಳಿಕೊಟ್ಟ “ಶೋಷಕರ ಧ್ವನಿ”
# ನಿನ್ನ ಸಂಬಂಧಿಗಳ ಜೊತೆ ಸಂಬಂಧಗಳನ್ನು ಮುರಿದುಕೊಳ್ಳಬೇಡ ಎಂದು ಹೇಳಿಕೊಟ್ಟ ಉತ್ತಮ “ಸಂಬಂಧಿ”
# ವ್ಯಾಪಾರದಲ್ಲಿ ಸುಳ್ಳು ಹೇಳಬೇಡಿ, ನಶಿಸಿದ ವಸ್ತುಗಳನ್ನು ಮರೆಮಾಚಿಸದೆ ಅವರಿಗೆ ತಿಳಿಸಿ, ವ್ಯಾಪಾರ ಮಾಡಿ ಎಂದು ಹೇಳಿಕೊಟ್ಟ ಅತ್ಯುತ್ತಮ “ವ್ಯಾಪಾರಿ”
# ಎದುರಾಳಿಯನ್ನು ಹೊಡೆದು ಉರುಳಿಸುವಾತ ನಿಜವಾದ ವೀರನಲ್ಲ. ಕೋಪ ಬಂದಾಗ ಸಹನೆಯಿಂದ ನಡೆದುಕೊಳ್ಳುವವನು ನಿಜವಾದ ವೀರ ಎಂದು ಹೇಳಿಕೊಟ್ಟ “ಸಹನಾಭೂತಿ”
# ವಿಧವೆಯರ ವಿವಾಹಕ್ಕೆ ಪ್ರೋತ್ಸಾಹ ನೀಡಿದ “ಆದರ್ಶ ವ್ಯಕ್ತಿ,”
# ತಮ್ಮ ಮಗಳು ಫಾತೀಮಾರನ್ನು ಜಗತ್ತಿಗೆ ಮಾದರಿಯಾಗಿ ಬೆಳೆಸಿದ ,”ಉತ್ತಮ ತಂದೆ”
#ಅನಾಥ ಮಕ್ಕಳ ಮುಂದೆ ಸ್ವಂತ ಮಕ್ಕಳನ್ನು ಪ್ರೀತಿಸಬೇಡಿ ಎಂದು ಹೇಳಿಕೊಟ್ಟ “ಅನಾಥ ರಕ್ಷಕ”
# ನಿಮ್ಮ ಮನೆಯ ಅಕ್ಕ ಪಕ್ಕದವರನ್ನು ವಿಚಾರಿಸಿ ನೀನು ಊಟವನ್ನು ಮಾಡು ಎಂದು ಹೇಳಿಕೊಟ್ಟ ಒಳ್ಳೆಯ “ನೆರೆಹೊರೆ”
# ಶರಾಬು ಗಾಂಜಾದಂತಹ ಎಲ್ಲಾ ಅಮಲು ತರಿಸುವ ವಸ್ತುಗಳನ್ನು ನಿಷೇಧಿಸಿದ “ಆರೋಗ್ಯ ರಕ್ಷಕ”
# ವಿಧವೆಯರ ಮುಂದೆ ತಮ್ಮ ಮಡದಿಯರನ್ನು ಸಲಹಬೇಡಿ ಎಂದು ಹೇಳಿಕೊಟ್ಟ “ಹೃದಯವಂತ”
# ತಮ್ಮ ಇಡೀ ಜೀವನದಲ್ಲಿ ಉತ್ತಮ ಆರೋಗ್ಯವನ್ನು ಹೇಗೆ ಇರಿಸಿಕೊಳ್ಳಬೇಕೆಂದು ಹೇಳಿಕೊಟ್ಟ ಉತ್ತಮ “ವೈದ್ಯ”
# ನೀನು ಇಷ್ಟಪಡುವ ವಸ್ತುವನ್ನೇ ನಿನ್ನ ತಮ್ಮನಿಗೂ ಇಷ್ಟಪಡು ಎಂದು ಹೇಳಿಕೊಟ್ಟ “ಅಣ್ಣ”
# ಕರಿಯ ಜನರನ್ನು ಗುಲಾಮರಾಗಿ ಕಾಣುವ ವ್ಯವಸ್ಥೆಯಲ್ಲಿ ಬಿಲಾಲ್ ಎಂಬ ಕರಿಯ ವ್ಯಕ್ತಿಯನ್ನು ಒಪ್ಪಿಕೊಂಡು ಕಬಾದ ಮೇಲೆ ಅಜಾನ್ ಹೇಳು ಎಂದು ಉನ್ನತ ಸ್ಥಾನ ನೀಡಿ ಗೌರವಿಸಿ ಸಮಾನತೆಯನ್ನು ವಿಶ್ವಕ್ಕೆ ಪರಿಚಯಿಸಿದ “ಸಮಾನತೆಯ ಪ್ರತೀಕ”
# ಆರ್ಥಿಕತೆಯಲ್ಲಿ ಮದೀನಾ ಎಂಬ ಪುಟ್ಟ ನಗರವನ್ನು ಎತ್ತರಕ್ಕೆ ಬೆಳೆಸಿದ “ಆರ್ಥಿಕ ತಜ್ಞ”
# ಮಡದಿಯರಿಗೆ ಅಡುಗೆಯಲ್ಲಿ ಹೇಗೆ ಸಹಾಯ ಮಾಡಬೇಕು ಎಂಬುದು ತಮ್ಮ ಜೀವನ ಶೈಲಿಯಲ್ಲಿ ಹೇಳಿಕೊಟ್ಟ ಅತ್ಯುತ್ತಮ “ಗಂಡ”
# ಹಾಸ್ಯದ ರೂಪದಲ್ಲಿಯೂ ಸುಳ್ಳನ್ನು ಹೇಳಬಾರದು ಅದು ಸಹ ಮಹಾ ಪಾಪ ಎಂದು ಎಚ್ಚರಿಸಿದ “ಸತ್ಯವಂತ”
# ಕೂಲಿಕಾರರ ಬೆವರು ಹನಿ ಆರುವ ಮುನ್ನವೇ ಪ್ರತಿಫಲವನ್ನು ಕೊಡುತ್ತಾರೆ ಎಂದು ಹೇಳಿಕೊಟ್ಟ “ಕಾರ್ಮಿಕ ಬಂಧು”
# ಇತರರ ಧರ್ಮವನ್ನು ಪರಿಹಾಸ್ಯ ಮಾಡಬಾರದೆಂದು ಹೇಳಿಕೊಟ್ಟ ಪರಧರ್ಮ “ಸಹಿಷ್ಣು”
# ತಾಯಿಯ ನೀತಿಯಿಂದ ಮಣ್ಣಿನ ಮಡಲಿಗೆ (ಗೋರಿ) ಹೋಗುವವರೆಗೆ ಜೀವನದ ರೀತಿಯನ್ನು ಜಗತ್ತಿಗೆ ಸಾರಿದ ಅತ್ಯುತ್ತಮ “ಮಾರ್ಗದರ್ಶಕ”
ಎಲ್ಲರಿಗೂ ಪ್ರವಾದಿ ಮೊಹಮ್ಮದ್ ಸಲ್ಲಲ್ಲಾಹು ಅಲೈಹಿವ ಸಲ್ಲಂ ರ # ಈದ್ ಮಿಲಾದ್ ಉನ್ನ ನಬಿ ಹಬ್ಬದ ಶುಭಾಶಯಗಳು.