ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರ ಬಗ್ಗೆ ಎಚ್ ಡಿ ಕುಮಾರಸ್ವಾಮಿಯವರು ನನಗೆ ಯಾವದೇ ಮಾಹಿತಿ ನೀಡಿಲ್ಲ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ ಎಮ್ ಇಬ್ರಾಹಿಂ ತಿಳಿಸಿದ್ದಾರೆ.
ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ನಂತರ ಮೊದಲ ಬಾರಿಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ರಾಜ್ಯ ಘಟಕದ ಅಧ್ಯಕ್ಷನಿದ್ದೇನೆ. ನನಗೆ ಮೈತ್ರಿ ಬಗ್ಗೆ ಮಾಹಿತಿ ನೀಡದೆ ಇರೋದರಿಂದ ಮನಸ್ಸಿಗೆ ನೋವಾಗಿದೆ ಎಂದು ಸಿ ಎಮ್ ಇಬ್ರಾಹಿಂ ಹೇಳಿದ್ದಾರೆ.
ಅಕ್ಟೋಬರ್ 16 ರಂದು ಅಲ್ಪಸಂಖ್ಯಾತರರು ಸೇರಿದಂತೆ ರಾಜ್ಯದ ಎಲ್ಲಾ ವರ್ಗದ ಜನರ ಅಭಿಪ್ರಾಯ ಕೇಳಿದ ಬಳಿಕ ಎಚ್ ಡಿ ಕುಮಾರಸ್ವಾಮಿ ಮತ್ತು ದೇವೇಗೌಡರನ್ನು ಭೇಟಿ ಮಾಡುವದಾಗಿ ತಿಳಿಸಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಬಳಿಕ ಒಂದು ಕಾಲು ಹೊರಗೆ ಇಟ್ಟಂತೆ ಕಂಡು ಬರುತ್ತಿದ್ದು, ಅಕ್ಟೋಬರ್ 16 ರಂದು ಸಿ ಎಮ್ ಇಬ್ರಾಹಿಂ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.
ಕರ್ನಾಟಕ ಫೈಲ್ಸ್ ಗೆ ಸಿಕ್ಕ ಮಾಹಿತಿ ಪ್ರಕಾರ ಸಿ ಎಮ್ ಇಬ್ರಾಹಿಂ, ಅಕ್ಟೋಬರ್ 16 ರ ನಂತರ ಜೆಡಿಎಸ್ ತೊರೆಯಲಿದ್ದು, ಶರದ ಪವಾರ ಅವರ ಎನ್ ಸಿ ಪಿ ಗೆ ಸೇರ್ಪಡೆಯಾಗಲಿದ್ದಾರೆ ಎಂದು ಗೊತ್ತಾಗಿದೆ. ಸಭಾಪತಿ ಮಾಡಿಲ್ಲ ಅನ್ನೋ ಕಾರಣಕ್ಕೆ ಕಾಂಗ್ರೇಸ್ ನಿಂದ ಹೊರ ಬಂದಿದ್ದ ಸಿ ಎಮ್ ಇಬ್ರಾಹಿಂ, ಮರಳಿ ಜೆಡಿಎಸ್ ಗೆ ಹೋಗಿದ್ದರು.