Download Our App

Follow us

Home » 404 – Page Not Found

ದಿವಾಳಿ ಎದ್ದ ಪಾಕಿಸ್ತಾನ. ಭಿಕ್ಷಾಟನೆಗೆ ಇಳಿದ ಬಡ ವರ್ಗ. ಸೌದಿಯಲ್ಲಿ ಪಾಕಿಸ್ತಾನಿ ಭಿಕ್ಷುಕರ ಬಂಧನ. ಜೈಲುಗಳು ಭರ್ತಿ.

ಪಾಕಿಸ್ತಾನ ದಿವಾಳಿ ಎದ್ದಿದೆ. ಧಾರ್ಮಿಕ ದಂಗೆ, ಭಯೋತ್ಪಾದಕ ಚಟುವಟಿಕೆಗಳಿಂದ ಬಳಲಿ ಬೆಂಡಾಗಿದೆ. ಆರ್ಥಿಕವಾಗಿ ತೀವ್ರ ಕುಸಿದಿರುವ ಪಾಕಿಸ್ತಾನದಲ್ಲಿ, ಹೊಟ್ಟೆ ತುಂಬಿಸಿಕೊಳ್ಳಲು, ಕೆಲವು ಜನ ಭಿಕ್ಷಾಟನೆಗೆ ಇಳಿದಿದ್ದಾರೆ. ತೀರ್ಥಯಾತ್ರೆಯ ನೆಪದಲ್ಲಿ ಮಧ್ಯಪ್ರಾಚ್ಯಕ್ಕೆ ಬರುವ ಪಾಕಿಸ್ತಾನಿಗಳು ಸೌದಿಯಲ್ಲಿ ಇಳಿದು ಅಲ್ಲಿಯೇ ಭಿಕ್ಷಾಟನೆಯಲ್ಲಿ ತೊಡಗುತ್ತಾರೆ ಎಂದು ಸೆನೆಟ್ ನ ಸ್ಥಾಯಿ ಸಮಿತಿ ಸಭೆಯಲ್ಲಿ ಕಾರ್ಯದರ್ಶಿ ಜೀಷನ್ ಖಾನ್ಸಾಡಾ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಹೀಗೆ ಭಿಕ್ಷಾಟನೆಯಲ್ಲಿ ತೊಡಗಿರುವ ಪಾಕಿಸ್ತಾನಿಯರನ್ನು ಸೌದಿಯಲ್ಲಿ ಬಂಧಿಸಲಾಗುತ್ತಿದೆ. ಶೇಕಡಾ 90 ರಷ್ಟು ಬಂಧಿತ ಭಿಕ್ಷುಕರು ಪಾಕಿಸ್ತಾನದಿಂದ ಬಂದವರು ಎಂದು ಸಿನೆಟ್ ವರದಿ ಮಾಡಿದೆ. ಭಿಕ್ಷಾಟನೆಗಾಗಿ ಗಲ್ಪ್ ದೇಶಗಳಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ, ಯಾತ್ರೀಕರ ವೇಷದಲ್ಲಿದ್ದ 16 ಜನರನ್ನು ಪಾಕಿಸ್ತಾನದ ಮುಲ್ತಾನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದ ದಿನದಿಂದ ದಿನಕ್ಕೆ ಆರ್ಥಿಕವಾಗಿ ಕುಸಿಯುತ್ತಿದ್ದು, ಬಡತನ ಎದುರಾಗಿದೆ. ಭಿಕ್ಷೆ ಬೇಡಿಯೇ ಬದುಕುವ ಸ್ಥಿತಿಗೆ ಅಲ್ಲಿನ ಬಡ ವರ್ಗ ಬಂದಿದೆ ಎಂದು ಹೇಳಲಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಖೋ ಖೋ ವಿಶ್ವಕಪ್ ಗೆ ಮುತ್ತಿಟ್ಟ ಭಾರತದ ವನಿತೆಯರು. ತಂಡದಲ್ಲಿ ಮಿಂಚಿದ ಕರ್ನಾಟಕದ ಯುವತಿ

ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಅಂತಿಮ ಸ್ಪರ್ಧೆಯಲ್ಲಿ ಭಾರತದ ಮಹಿಳಾ ತಂಡ ಐತಿಹಾಸಿಕ ಜಯ ಸಾಧಿಸಿದೆ.  ಅಂತಿಮ ಪಂದ್ಯದಲ್ಲಿ, ಭಾರತದ ಮಹಿಳಾ ಖೋ ಖೋ ತಂಡ,

Live Cricket

error: Content is protected !!