ಧಾರವಾಡ ಜಿಲ್ಲೆಯ ಕಲಘಟಗಿ ಹೊರವಲಯದಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದೆ. ಕೆ ಈ ಬಿ ಗ್ರಿಡ್ ಬಳಿ ಇರುವ ಕಬ್ಬಿನ ಹೊಲದಲ್ಲಿ ಗಂಡು ಮಗುವಿಗೆ ಜನ್ಮ ಕೊಟ್ಟ ತಾಯಿ, ಮಗುವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ. ಮಗುವಿನ ಅಳುವ ದ್ವನಿ ಕೇಳಿದ ಅಕ್ಕಪಕ್ಕದವರು ಮಗುವನ್ನು ಬಚಾವ್ ಮಾಡಿ, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇರುವೆಗಳು ಮಗುವಿಗೆ ಕಚ್ಚಲು ಆರಂಭಿಸಿದಾಗ ಮಗು ಪತ್ತೆಯಾಗಿದೆ ಎನ್ನಲಾಗಿದೆ. ಕಲಘಟಗಿ ಪೊಲೀಸರು ಪ್ರಕರಣ ಧಾಖಲಿಸಿಕೊಂಡು, ಮಗುವನ್ನು ಶಿಶು ಪಾಲನಾ ಕೇಂದ್ರಕ್ಕೆ ರವಾನಿಸಿದ್ದಾರೆ.
