80 ರ ದಶಕದಲ್ಲಿ ರಾಜ್ಯ ರಾಜಕಾರಣದಲ್ಲಿ ಮಿಂಚಿದ ಆಗಿನ ಮುಖ್ಯಮಂತ್ರಿ ಆರ್ ಗುಂಡುರಾವ ಅವರದ್ದು, ಕಲರ್ ಫುಲ್ ಜೀವನ. ದ್ವನಿ ಇಲ್ಲದವರಿಗೆ ದ್ವನಿಯಾಗಿ ಕೆಲಸ ಮಾಡಿದವರು ಆರ್ ಗುಂಡೂರಾವ. ಸಧ್ಯ ಅವರ ಮಗ ದಿನೇಶ ಗುಂಡುರಾವ, ಸಿದ್ದರಾಮಯ್ಯನವರ ಸಂಪುಟದಲ್ಲಿ ಮಂತ್ರಿಯಾಗಿದ್ದಾರೆ. ಅಪ್ಪನ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ದಿನೇಶ್ ಗುಂಡುರಾವ, ಪ್ರಸಕ್ತ ರಾಜಕಾರಣದ ಸಂದರ್ಭದಲ್ಲಿ ತಂದೆಯನ್ನು ನೆನೆಸಿಕೊಂಡಿದ್ದಾರೆ.
” ನಾನು ಎಂದಿಗೂ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ. ನನ್ನ ತಂದೆಯವರು ವಿಶಾಲ ಮನೋಭಾವ ಹೊಂದಿದ್ದರು. ಅವರ ನಡೆ ನುಡಿ, ರಾಜಕೀಯ ವ್ಯಕ್ತಿತ್ವ ನನ್ನ ಮೇಲೆ ಅಗಾಧವಾದ ಪ್ರಭಾವ ಬೀರಿದೆ. ಅಧಿಕಾರ ಇದ್ದಾಗ ಮೆರೆಯಬಾರದು ಎಂಬುದನ್ನು ಅವರಿಂದ ಕಲಿತಿದ್ದೇನೆ.” ಎಂದು ಹೇಳುವ ಮೂಲಕ ರಾಜಕಾರಣದ ನೀತಿ ಪಾಠ ಹೇಳಿದ್ದಾರೆ. ಅವರು ಏನೆಲ್ಲಾ ಹೇಳಿದ್ದಾರೆ ಅನ್ನೋದು ಈ ವಿಡಿಯೋದಲ್ಲಿದೆ ನೋಡಿ.