ಮೀಸಲಾತಿಗೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಹಡಪದ ಶ್ರೀಗಳು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುದ್ದೆಬಿಹಾಳ್ ತಂಗಡಗಿ ಹಡಪದ ಮಠದ ಶ್ರೀ ಅನ್ನದಾನಿ ಭಾರತಿ ಹಡಪದ ಅಣ್ಣಪ್ಪ ಸ್ವಾಮೀಜಿಗಳು ರೋಷಾ ವೇಷದ ಭಾಷಣ ಮಾಡಿದ್ದಾರೆ. ದಾವಣಗೆರೆಯಲ್ಲಿ ನಡೆದ ಹಡಪದ ಜಯಂತಿ, ಜನಜಾಗೃತಿ ಸಮಾವೇಶದಲ್ಲಿ ಮೀಸಲಾತಿ ಕುರಿತು ಜಾಗೃತಿ ಮೂಡಿಸಿದರು.
ಯಾರು ಸಹ ಕರೆದು ಮೀಸಲಾತಿ ಸೌಲಭ್ಯ ಕೊಡೋದಿಲ್ಲ. ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಅವಶ್ಯಕವಾಗಿದೆ. 2ಎ ಮೀಸಲಾತಿಗಾಗಿ ಹೋರಾಟ ಮಾಡಬೇಕಿದೆ. ಮಕ್ಕಳ ಭವಿಷ್ಯ ಉಜ್ವಲ ಆಗಬೇಕು ಎಂದರೆ ಬೀದಿಗೆ ಇಳಿಯಿರಿ. ಬೀದಿಗೆ ಇಳಿದು ಕಲ್ಲು ತೂರಿ, ಬೆಂಕಿ ಹಚ್ಚಿ. ಆಗ ಸವಲತ್ತು ಸಿಗುತ್ತವೆ, ಸುಮ್ ಸುಮ್ಮನೆ ಸೌಲಭ್ಯ ಯಾರು ಕೊಡುವುದಿಲ್ಲ. ಎಂದು ಹೇಳುವ ಮೂಲಕ ಕಿಡಿ ಹೊತ್ತಿಸಿದರು.
ನಿಮ್ಮ ಹಕ್ಕು ನೀವೆ ಕಿತ್ತುಕೊಳ್ಳಿ, ನೀವೆ ಬೆಂಕಿ ಹಚ್ಚಿ. ಇಲ್ಲ ಎಂದರೆ ನಿಮ್ಮ ಹಕ್ಕುಗಳನ್ನು ಮೂಟೆ ಕಟ್ಟೆ ಇಡಿ ಎಂದ ಹಡಪದ ಶ್ರೀಗಳು ವಿವಾದಾತ್ಮಕ ಹೇಳಿಕೆ ನೀಡಿದರು.