ಲಘು ಶಸ್ತ್ರ ಚಿಕಿತ್ಸೆ, ಆದಷ್ಟು ಬೇಗ ಗುಣಮುಖನಾಗಿ ತಮ್ಮ ಸೇವೆಗೆ ಅಣಿಯಾಗುವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟ್ ಮಾಡಿದ್ದಾರೆ. ವೈಧ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದು, ನನ್ನ ಆರೋಗ್ಯದ ಬಗ್ಗೆ ಶುಭ ಹಾರೈಸಿದ ಎಲ್ಲರಿಗೂ ಅನಂತ ಧನ್ಯವಾದಗಳು ಎಂದು ಬೊಮ್ಮಾಯಿ ಹೇಳಿದ್ದಾರೆ. ನನ್ನನ್ನು ಭೇಟಿ ಮಾಡಲು ಆಸ್ಪತ್ರೆಗೆ ಬರುವದರಿಂದ ಇನ್ನುಳಿದ ರೋಗಿಗಳಿಗೆ ತೊಂದರೆಯಾಗಲಿದೆ, ಗುಣಮುಖನಾದ ಬಳಿಕ ಅವರನ್ನು ಭೇಟಿ ಮಾಡುತ್ತೇನೆ ಎಂದು ಬೊಮ್ಮಾಯಿ ಮನವಿ ಮಾಡಿದ್ದಾರೆ.
