ಪ್ರತಿಷ್ಟಿತ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಸ್ಮಾರ್ಟ್ ಸಿಟಿ ಹಣೆಪಟ್ಟಿ ಕಟ್ಟಿಕೊಂಡ ಬಳಿಕ ಅವಳಿ ನಗರದ ಖದರೇ ಬೇರೆಯಾಗಿದೆ. ಇದೀಗ ರಾಜ್ಯ ಕಾಂಗ್ರೇಸ್ ಸರ್ಕಾರ ಅವಳಿ ನಗರದ ಅಭಿವೃದ್ಧಿಗೆ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡಿದೆ. ದಿನದಿಂದ ದಿನಕ್ಕೆ ಹುಬ್ಬಳ್ಳಿ ಮತ್ತು ಧಾರವಾಡ ವಿಸ್ತಾರಗೊಳ್ಳುತ್ತಿದ್ದು, ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿದ್ದು, ಮುಸ್ಲಿಂ ಕೋಟಾದಲ್ಲಿ ಹುಬ್ಬಳ್ಳಿಯಿಂದ ಮಹಾನಗರ ಕಾಂಗ್ರೇಸ್ ಅಧ್ಯಕ್ಷ, ಅಲ್ತಾಫ್ ಹಳ್ಳೂರು, ಹಿರಿಯ ಕಾಂಗ್ರೇಸ್ ನಾಯಕ ವಹಾಬ್ ಮುಲ್ಲಾ, ಮಝಹರಖಾನ, ಅನ್ವರ ಮುಧೋಳ, ಮಾಜಿ ಪಾಲಿಕೆ ಸದಸ್ಯ ಬಶೀರ ಗೂಡಮಾಲ್, ಧಾರವಾಡದಿಂದ ಮಾಜಿ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ರೇಸಿನಲ್ಲಿದ್ದಾರೆ.
ಇನ್ನುಳಿದಂತೆ ಹುಬ್ಬಳ್ಳಿಯಿಂದ ಹಿರಿಯ ಕಾಂಗ್ರೇಸ್ ಮುಖಂಡ ಸತೀಶ್ ಮೆಹರವಾಡೆ, ಎನ್ ಎಸ್ ಯೂ ಐ ಮಾಜಿ ಅಧ್ಯಕ್ಷ ಬಂಗಾರೇಶ್ ಹಿರೇಮಠ, ಪಂಚಮಸಾಲಿ ಯುವ ವೇದಿಕೆಯ ಮುಖಂಡ ರಾಜಶೇಖರ ಮೆಣಸಿನಕಾಯಿ, ಧಾರವಾಡದಿಂದ ಮಾಜಿ ಹುಡಾ ಅಧ್ಯಕ್ಷ ಹಾಗೂ ಸಿದ್ದರಾಮಯ್ಯನವರ ಅಪ್ತ ದಾನಪ್ಪ ಕಬ್ಬೇರ, ಕೆ ಪಿ ಸಿ ಸಿ ಮಾಧ್ಯಮ ವಿಶ್ಲೇಷಕ, ಪಿ ಎಚ್ ನೀರಲಕೇರಿ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಕಟ್ಟಾ ಶಿಷ್ಯ, ರಾಬರ್ಟ್ ದದ್ದಾಪುರಿ, ಇತ್ತೀಚಿಗೆ ಬಿಜೆಪಿ ತೊರೆದು ಕಾಂಗ್ರೇಸ್ ಸೇರಿರುವ ತವನಪ್ಪ ಅಷ್ಟಗಿ ರೇಸ್ ನಲ್ಲಿದ್ದಾರೆ. ಈ ಮಧ್ಯೆ ಅಲ್ತಾಫ್ ಹಳ್ಳೂರು ಹಾಗೂ ಇಸ್ಮಾಯಿಲ್ ತಮಟಗಾರ 2024 ರಲ್ಲಿ ಖಾಲಿಯಾಗಲಿರುವ ವಿಧಾನ ಪರಿಷತಗೆ ಆಯ್ಕೆ ಮಾಡುವಂತೆ ಪಕ್ಷದ ವರಿಷ್ಟರ ಮೇಲೆ ಒತ್ತಡ ಹಾಕುತ್ತಿದ್ದಾರೆ.
![Karnataka Files](https://secure.gravatar.com/avatar/3c8a792dfb280b36a94603273157ff83?s=96&r=g&d=https://karnatakafiles.com/wp-content/plugins/userswp/assets/images/no_profile.png)