ಬೆಂಗಳೂರು – ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ನಿಗಮ ಮಂಡಳಿಗೆ ನೇಮಕ ಮಾಡುವ ಪ್ರಕ್ರೀಯೆ ಆರಂಭವಾಗಿದೆ. ಈ ತಿಂಗಳ ಕೊನೆಯಲ್ಲಿ ನಿಗಮ ಮಂಡಳಿಗಳು ರಚನೆಯಾಗಲಿದೆ ಎಂದು ತಿಳಿದು ಬಂದಿದೆ. ಸಚಿವ ಸ್ಥಾನ ವಂಚಿತರನ್ನು ಸಮಾಧಾನ ಮಾಡುವ ನಿಟ್ಟಿನಲ್ಲಿ ಆಯಕಟ್ಟಿನ ಸ್ಥಾನಗಳನ್ನು ನೀಡಲು ಕಾಂಗ್ರೇಸ್ ಉಸ್ತುವಾರಿ ಸುರ್ಜೆವಾಲಾ ಪಟ್ಟಿ ನೀಡುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ.
ಅಸಮಾಧಾನಗೊಂಡಿರುವ ಶಾಸಕರಿಗೆ ಪ್ರಾದಾನ್ಯತೆ ಮೇಲೆ ನಿಗಮ ಮಂಡಳಿ ಕೊಡುವ ತೀರ್ಮಾನಕ್ಕೆ ಬರಲಾಗಿದ್ದು, ಆಳಂದ ಶಾಸಕ ಬಿ ಆರ್ ಪಾಟೀಲ್, ಯೋಜನಾ ಮಂಡಳಿ ಉಪಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಕಾಂಗ್ರೇಸ್ ಸ್ವಂತ ಬಲದ ಮೇಲೆ 135 ಸ್ಥಾನಗಳನ್ನು ಗೆದ್ದು ಬೀಗಿದ್ದು, ಸಹಜವಾಗಿ ನಿಗಮ ಮಂಡಳಿ ಮೇಲೆ ಅನೇಕರ ಕಣ್ಣು ಬಿದ್ದಿದೆ.
ಮೊದಲ ಹಂತದಲ್ಲಿ 25 ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡಲಾಗುವದು ಎಂದು ಹೇಳಲಾಗಿದ್ದು, ಲೋಕಸಭಾ ಚುನಾವಣೆ ನಂತರವೇ ನಿಗಮ ಮಂಡಳಿಗೆ ಸಂಪೂರ್ಣ ನೇಮಕ ಮಾಡಲು ಯೋಚಿಸಲಾಗಿದೆ. ಕೆ ಆರ್ ಐ ಡಿ ಎಲ್ ( land army ) ಅಧ್ಯಕ್ಷ ಸ್ಥಾನಕ್ಕೆ, ಹುಬ್ಬಳ್ಳಿ ಪೂರ್ವ ಶಾಸಕ ಪ್ರಸಾದ ಅಬ್ಬಯ್ಯ ನವರ ಹೆಸರು ಬಹುತೇಕ ಅಂತಿಮವಾಗಿದೆ ಎನ್ನಲಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಸಾರಿಗೆ ಸಂಸ್ಥೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇರಿದಂತೆ ಮಹತ್ವದ ನಿಗಮಗಳ ಮೇಲೆ ಶಾಸಕರು ಕಣ್ಣಿಟ್ಟಿದ್ದು, ಈಗಿನಿಂದಲೇ ಲಾಭಿ ನಡೆಸಿದ್ದಾರೆ.