ಸೈಬರ್ ಅಪರಾಧಿಗಳು ದೇಶ, ರಾಜ್ಯದ ಗಡಿಯನ್ನು ಮೀರಿದವರಾಗಿದ್ದು, ಪ್ರಕರಣ ಭೇದಿಸುವುದು ಸವಾಲಾಗಿದೆ. ಇದಕ್ಕಾಗಿ ಪೊಲೀಸ್ ಇಲಾಖೆ ಹೊಸದಾಗಿ ನೇಮಿಸುವಾಗ ಬಿಇ, ಎಂಬಿಎ ಪದವೀಧರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೈಬರ್ ಕ್ರೈಮ್ ಗಳು ಹೆಚ್ಚುತ್ತಿದ್ದು, ದಿನನಿತ್ಯ ಕೇಸುಗಳು ಧಾಖಲಾಗುತ್ತಿವೆ. ಸೈಬರ್ ಕ್ರೈಮ್ ನಿಂದಾಗಿ ಲಕ್ಷಾಂತರ ಜನ ಮೋಸಕ್ಕೆ ಇಡಾಗುತ್ತಿದ್ದಾರೆ. ಪ್ರಕರಣ ಭೇದಿಸುವದು ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
