ಕೃಷಿ ಭೂಮಿ ಖರೀದಿ ಮಾಡುವಾಗ ಎಚ್ಚರದಿಂದ ಇರಬೇಕು. ಯಾರದೋ ಭೂಮಿಯನ್ನು ಯಾರೋ ಮಾರಾಟ ಮಾಡುವ, ಮತ್ತು ಒಂದೇ ಭೂಮಿಯನ್ನು ನಾಲ್ಕೈದು ಜನರಿಗೆ ಮಾರಾಟ ಮಾಡುವ ಪ್ರಕರಣಗಳು ಜಾಸ್ತಿಯಾಗಿವೆ. ಹಾಗಾಗಿ ಕರ್ನಾಟಕ ಫೈಲ್ಸ್, ಕೃಷಿ ಭೂಮಿ ಖರೀದಿ ಮಾಡುವ ಮುನ್ನ ಬೇಕಾದ ಧಾಖಲೆಗಳ ಬಗ್ಗೆ ಮಾಹಿತಿ ನೀಡುತ್ತಿದೆ.
ಇವಿಷ್ಟು ಧಾಖಲೆಗಳು ಇದ್ದರೆ ಮಾತ್ರ ಭೂಮಿ ಖರೀದಿ ಮಾಡಬಹುದಾಗಿದೆ.
ಕೃಷಿ ಭೂಮಿ ಖರೀದಿಗೆ ಅವಶ್ಯವಾಗಿ ಬೇಕಾಗಿರುವ ಧಾಖಲೆಗಳು
1- EC ( ಹೊರೆಯ ಪ್ರಮಾಣಪತ್ರ )2
-ಆಕಾರಬಂದ
3-ಸರ್ವೇ ಟಿಪ್ಪಣಿ, ಸರ್ವೆ ಸ್ಕೆಚ್, ಹಿಸ್ಸಾ ಮೋಜಿಣಿ
4-1964 ರಿಂದ ಭೂಮಿ ಖರೀದಿ ಮಾಡುವ ಸಮಯದವರೆಗೆ ಉತಾರ
5-ಎಲ್ಲ ಮ್ಯೂಟೇಷನ್ ಗಳು
6-ಗ್ರಾಮ ನಕಾಶ
7-ಹಿಂದಿನ ಶೀರ್ಷಿಕೆ ಪತ್ರಗಳು, ( tittle deeds )ಮಾರಾಟದ ಪತ್ರ, ಉಡುಗೊರೆ ಪತ್ರ,
8-1965 ರ ಮೊದಲಿನ ಫಾರಂ ನಂಬರ 5,6,7,
9-ಖರೀದಿ ಮಾಡುವ ಭೂಮಿ PTCL ಕಾಯಿದೆಯಡಿಯಲ್ಲಿ SC /ST ಗೆ ಸೇರಿದೆಯೇ ಎಂಬುದನ್ನು ಪರಿಶೀಲಿಸಿ
10-ಖರೀದಿ ಮಾಡುವ ಭೂಮಿ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಇದ್ದರೆ, ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿ ಪ್ರಾಧಿಕಾರದಿಂದ ಆಕ್ಷೇಪಣಾ ರಹಿತ ಪ್ರಮಾಣ ಪತ್ರ ಪಡೆಯಬೇಕು
11-ಖರೀದಿ ಮಾಡುವ ಭೂಮಿ ಹಸಿರು ವಲಯದಲ್ಲಿ ಇರುವದನ್ನು ಖಚಿತ ಪಡಿಸಿಕೊಳ್ಳಿ.
12-ಮಂಜೂರಾದ ಭೂಮಿ ಇದ್ದರೆ, ಭವಿಷ್ಯದ ದಾವೆ ತಪ್ಪಿಸಲು AC ಅಥವಾ DC ಇಂದ ಅಗತ್ಯ ಮಾಹಿತಿ ಪಡೆದುಕೊಳ್ಳಿ
13-ಖರೀದಿ ಮಾಡುವ ಭೂಮಿ ಸರ್ಕಾರಕ್ಕೆ ಮರಳುವ ಸಾಧ್ಯತೆ ಬಗ್ಗೆ ಮಾಹಿತಿ ಪಡೆಯಿರಿ
14-ಭೂ ಮಾಲೀಕನ ವಂಶಾವಳಿ ಪ್ರಮಾಣಪತ್ರವನ್ನು ಕಂದಾಯ ಇಲಾಖೆಯಿಂದ ಅಧಿಕೃತವಾಗಿ ಪಡೆದುಕೊಳ್ಳಿ
15-ಖರೀದಿ ಮಾಡುವ ಭೂಮಿಯ ಮೇಲೆ ಯಾವದಾದರೂ ವ್ಯಾಜ್ಯ ಬಾಕಿ ಇದೆಯಾ ಅನ್ನೋದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ
16-ಖರೀದಿ ಮಾಡುವ ಜಮೀನು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ( ಮಂಜೂರಾತಿ ) ಸೇರಿದ್ದರೆ, ಖರೀದಿ ಮಾಡುವ ಮುನ್ನ ಯೋಚಿಸಿ
17-ಮಾಲೀಕನಿಗೆ ಭೂಮಿಯೂ ಮೃತ್ಯು ಪತ್ರದ ಮುಖಾಂತರ ಬಂದಿದ್ದರೆ, ನ್ಯಾಯಾಲಯದಿಂದ ಉತ್ತರಾಧಿಕಾರತ್ವದ ಪ್ರಮಾಣ ಪತ್ರ ಪಡೆಯಿರಿ
18-ಹಿಡುವಳಿ ಚೀಟಿ ಪರಿಶೀಲಿಸಿ
19-ಭೂ ಮಾಲೀಕನ ಜೊತೆ ಆತನ ಹೆಂಡತಿಯ ಸಹಿ ಪಡೆಯಿರಿ
20-ಭೂ ಮಾಲೀಕನಿಗೆ ಇಬ್ಬರು ಹೆಂಡತಿಯರಿದ್ದರೆ, ಎರಡನೇ ಹೆಂಡತಿಯ ಮಕ್ಕಳ ಸಹಿ ಪಡೆಯಿರಿ.
21-ಖರೀದಿಸುವ ಜಮೀನಿಗೆ ಕನಿಷ್ಟ 12 ಅಡಿ ಅಗಲದ ರಸ್ತೆ ಇದೆಯಾ ಎಂಬುದನ್ನು ಪರಿಶೀಲಿಸಿ
22-ಭೂಮಿ ಖರೀದಿಸುವ ಮುನ್ನ ಭೂಮಿ ಖರೀದಿ ಆಗತ್ತಾ ಅನ್ನೋದರ ಬಗ್ಗೆ ನೋಂದಣಿ ಕಚೇರಿಯಲ್ಲಿ ಕೇಳಿ ತಿಳಿದುಕೊಳ್ಳಿ