ವಾಯು ವಿಹಾರಕ್ಕೆ ಹೋಗಿದ್ದ ವ್ಯಕ್ತಿಯೊಬ್ಬನ ಮೇಲೆ ಅಪರಿಚಿತ ವಾಹನ ಹರಿದ ಪರಿಣಾಮ ವ್ಯಕ್ತಿಯೊಬ್ಬನ ಒಂದು ಕೈ ಬಿಟ್ಟು ಉಳಿದೆಲ್ಲ ದೇಹ ಸಂಪೂರ್ಣವಾಗಿ ಛಿದ್ರ ವಾದ ಘಟನೆ ಹುಬ್ಬಳ್ಳಿಯ ಧಾರವಾಡ ಬೈಪಾಸ್ ಬಳಿ ನಡೆದಿದೆ.
ಸುಮಾರು 50 ರಿಂದ 55 ವರ್ಷದ ವ್ಯಕ್ತಿ ಶಿಮ್ಲಾ ನಗರದ ಬಳಿ ಪ್ರತಿನಿತ್ಯ ವಾಯು ವಿಹಾರ ಮಾಡಲು ಈ ರಸ್ತೆಯಲ್ಲಿ ಬರುತ್ತಿದ್ದರಂತೆ, ಇಂದು ಬೆಳ್ಳಿಗ್ಗೆ ಕೂಡಾ ವಾಯು ವಿಹಾರ ಮಾಡಲು ಬಂದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಮೃತ ದೇಹ ಕಿಮ್ಸ್ ಆಸ್ಪತ್ರೆ ಶವಾಗಾರದಲ್ಲಿದ್ದು, ಮೃತನ ಗುರುತು ಪತ್ತೆಯಾಗಿಲ್ಲ.
