ಕಾರ್ ಮೇಲೆ ಪ್ರೆಸ್ ಅಂತಾ ಬರೆಯಿಸಿ ಅಕ್ರಮವಾಗಿ ಬೇರೆ ರಾಜ್ಯದಿಂದ ಸಾರಾಯಿ ತಂದು ಮಾರಾಟ ಮಾಡುತ್ತಿದ್ದ ಖತರ್ನಾಕ್ ಆಸಾಮಿಯನ್ನು ಹುಬ್ಬಳ್ಳಿಯ ಸಿಸಿಬಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.
ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ವಿಶ್ವೇಶ್ವರ ನಗರದ ಶ್ರೀಕಾಂತಯ್ಯ ಹಿರೇಮಠ ಎಂಬಾತ ತನ್ನ ಎಲ್ಲೋ ಬೋರ್ಡ್ ಕಾರ್ ಮೇಲೆ ಪ್ರೆಸ್ ಅಂತಾ ಬರೆಯಿಸಿ ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ತಂದು ನಗರದಲ್ಲಿ ಮಾರಾಟ ಮಾಡುವ ಕಾಯಕವನ್ನು ನಡೆಸಿದ್ದ.
ಈ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಸಿಸಿಬಿ ಇನ್ಸೆಕ್ಟರ್ ಗುಳಾರಿ ನೇತೃತ್ವದ ತಂಡ ಶ್ರೀಕಾಂತಯ್ಯ ದೇಶಪಾಂಡೆ ನಗರದ ಗುಜರಾತ್ ಭವನದ ಬಳಿ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದಾಗ ದಾಳಿ ಮಾಡಿ ಕಾರ್‌ನಲ್ಲಿ ಗೋವಾ ರಾಜ್ಯದ 35 ಲೀಟರ್ ಅಕ್ರಮ ಮದ್ಯ ಪತ್ತೆಯಾಗಿದೆ. ಈ ಹಿನ್ನೆಲೆ ಕಾರ್ ಹಾಗೂ ಸಾಗಾಟ ಮಾಡಲು ಬಳಸುತ್ತಿದ್ದ ಕಾರನ್ನು ಸೀಜ್ ಮಾಡಿ ಆರೋಪಿಯನ್ನು ಜೈಲಿಗೆ ಅಟ್ಟಿದ್ದಾರೆ.
