ತೆಲಂಗಾಣ ಸಚಿವ ಮತ್ತು ಬಿ ಆರ್ ಎಸ್ ಪಕ್ಷದ ಮುಖಂಡ ಕೆ ಟಿ ಆರ್ ರಾವ್ ಅದಿಲಾಬಾದ ಜಿಲ್ಲೆಯ ಅರ್ಮೂರನಲ್ಲಿ ಪ್ರಚಾರ ವಾಹನದಿಂದ ಕೆಳಗೆ ಬಿದ್ದಿದ್ದಾರೆ. ಕೆ ಟಿ ಆರ್ ರಾವ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ತೆಲಂಗಾಣದಲ್ಲಿ ಕಾಂಗ್ರೇಸ್ ಹಾಗೂ ಬಿ ಆರ್ ಎಸ್ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಪಕ್ಷದ ಅಭ್ಯರ್ಥಿ ಪರ ಅಬ್ಬರದ ಪ್ರಚಾರ ನಡೆಸಿದ್ದ ಕೆ ಟಿ ಆರ್ ಜನರತ್ತ ಕೈ ಬೀಸುತ್ತ ಬಂದಾಗ ಈ ಘಟನೆ ನಡೆದಿದೆ.
