Download Our App

Follow us

Search
Close this search box.
Home » ಕರ್ನಾಟಕ » ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕಕ್ಕೆ ಅಸಮಾಧಾನ ! ಹುಬ್ಬಳ್ಳಿ ಧಾರವಾಡದಲ್ಲಿ ಕಾಣಿಸದ ವಿಜಯೇಂದ್ರರ ಬ್ಯಾನರಗಳು.

ಬೆಂಗಳೂರು ಹೊರತು ಪಡಿಸಿದರೆ ಹುಬ್ಬಳ್ಳಿ ಮತ್ತು ಧಾರವಾಡ ರಾಜ್ಯದ ಎರಡನೇ ಪ್ರಮುಖ ರಾಜಕೀಯ ಶಕ್ತಿ ಕೇಂದ್ರವಾಗಿವೆ. ಮೇಲಾಗಿ ಅವಳಿ ನಗರಗಳು ಬಿಜೆಪಿಗೆ ಶಕ್ತಿ ಕೊಟ್ಟ ನಗರಗಳು. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿನ ಬಿಜೆಪಿ ನಾಯಕರು ಬಿ ವೈ ವಿಜಯೇಂದ್ರ ಅವರ ನೇಮಕಕ್ಕೆ ಅಸಮಾಧಾನಗೊಂಡರಾ ಅನ್ನೋ ಅನುಮಾನ ಇದೀಗ ಕಾಡುತ್ತಿದೆ.

ಹೀಗೆ ಅನುಮಾನ ಪಡುವದಕ್ಕೂ ಕಾರಣವಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮಗ, ಶಿಕಾರಿಪುರದ ಶಾಸಕ ಬಿ ವೈ ವಿಜಯೇಂದ್ರ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರಾಗಿ ನಾಲ್ಕು ದಿನಗಳು ಕಳೆಯುತ್ತ ಬಂದವು. ನಾಲ್ಕು ದಿನಗಳಾದರು ಸಹ ಹುಬ್ಬಳ್ಳಿ ಧಾರವಾಡದಲ್ಲಿ ಬಿ ವೈ ವಿಜಯೇಂದ್ರರ ನೇಮಕಕ್ಕೆ ಅಭಿನಂಧಿಸುವ ಮತ್ತು ಹೊಸ ಅಧ್ಯಕ್ಷರನ್ನು ಸ್ವಾಗತಿಸುವ ಒಂದೇ ಒಂದು ಬ್ಯಾನರಗಳು ಕಾಣುತ್ತಿಲ್ಲ.

ಸಣ್ಣ ಪುಟ್ಟ ಕಾಮಗಾರಿಗಳ ಶಂಕುಸ್ಥಾಪನೆಗೆ ಬೃಹತ್ ಬ್ಯಾನರಗಳನ್ನು ಅಳವಡಿಸುವ ಬಿಜೆಪಿಗರು, ಬಿ ವೈ ವಿಜಯೇಂದ್ರ ಅವರ ಬ್ಯಾನರ ಹಾಕದೆ ಇರುವದು ಕುತೂಹಲ ಮೂಡಿಸಿದೆ. ಸಣ್ಣ ಪುಟ್ಟ ಕಾಮಗಾರಿಯ ಶಂಕುಸ್ಥಾಪನೆಗೆ ತೋರುವ ಉತ್ಸಾಹ, ಬಿ ವೈ ವಿಜಯೇಂದ್ರ ಅವರ ವಿಷಯದಲ್ಲಿ ಕಂಡು ಬರದೇ ಇರುವದು ಸೋಜಿಗ ಮೂಡಿಸಿದೆ.

ಬಿಜೆಪಿ ನೂತನ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಆಯ್ಕೆಯಾದ ಬಳಿಕ, ನೇಮಕದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಹೋದ ಮಾಧ್ಯಮದವರಿಗೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಬಿ ವೈ ವಿಜಯೇಂದ್ರ ನೇಮಕಕ್ಕೆ ಬೆಲ್ಲದ ಅವರು ಅಸಮಾಧಾನಗೊಂಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.

ಬಿಜೆಪಿಯ ನೂತನ ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಬಿ ವೈ ವಿಜಯೇಂದ್ರ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಎಸ್ ಎಮ್ ಕೃಷ್ಣ ಅವರು ಸೇರಿದಂತೆ ಅನೇಕ ಹಿರಿಯ ನಾಯಕರನ್ನು ಭೇಟಿಯಾಗಿ ಆಶಿರ್ವಾದ ಪಡೆದಿದ್ದಾರೆ.

ಬಿಜೆಪಿಯ ಭದ್ರಕೋಟೆಯಾಗಿರುವ ಧಾರವಾಡ ಜಿಲ್ಲೆಯಲ್ಲಿ ಓರ್ವ ಸಂಸದರು, ಮೂವರು ಬಿಜೆಪಿ ಶಾಸಕರು, ಇಬ್ಬರು ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ಇದ್ದರು ಸಹ, ಬಿ ವೈ ವಿಜಯೇಂದ್ರ ಇವರಿಗೆಲ್ಲ ಬೇಡವಾದರೆ ? ಅನ್ನೋ ಮಾತು ಕೇಳಿ ಬರುತ್ತಿವೆ. 

Karnataka Files
Author: Karnataka Files

Leave a Comment

RELATED LATEST NEWS

Top Headlines

ಶಮನಗೊಂಡ ಶಿಗ್ಗಾವಿ ಕಾಂಗ್ರೇಸ್ಸಿನ ಆಂತರಿಕ ಸಮರ. ಪಠಾಣ ಗೆಲ್ಲಿಸಿಕೊಂಡು ಬಂದಲ್ಲಿ ಖಾದ್ರಿಗೆ ಒಲಿಯಲಿದೆ ಎಂ ಎಲ್ ಸಿ ಸ್ಥಾನ

ಹಾವೇರಿ ಜಿಲ್ಲೆಯ ಶಿಗ್ಗಾವಿ ಉಪ ಚುನಾವಣಾ ಕಣ ದಿನದಿಂದ ದಿನಕ್ಕೆ ಸಂಚಲನ ಮೂಡಿಸುತ್ತಿದೆ. ಯಾಸಿರ್ ಖಾನ್ ಪಠಾಣ ಕಾಂಗ್ರೇಸ್ ಅಭ್ಯರ್ಥಿಯಾಗಿ ಘೋಷಣೆಯಾದ ಬೆನ್ನಲ್ಲೇ ಬಂಡೆದಿದ್ದ ಮಾಜಿ ಶಾಸಕ

Live Cricket

error: Content is protected !!