ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಇಸ್ಲಾಂ ಧರ್ಮದ ಧಾರ್ಮಿಕ ಸಭೆಯಲ್ಲಿ ಐಸಿಸ್ ನಂಟು ಇರುವ ಜನ ಬಂದಿದ್ದರು ಎಂದು ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಮಾಜಿ ಸಚಿವ ಎ ಎಮ್ ಹಿಂಡಸಗೇರಿ ಹೇಳಿದ್ದಾರೆ.
ಸ್ವ ಪಕ್ಷದ ವಿರುದ್ಧವು ಮಾತನಾಡುವ ಯತ್ನಾಳ, ಸುಳ್ಳು ಆರೋಪ ಮಾಡಿದ್ದು, ಯತ್ನಾಳ ಹೇಳಿಕೆ ಖಂಡಿಸಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಮ್ ರು ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇಸ್ಲಾಂ ಧರ್ಮದ ಧರ್ಮಗುರುಗಳು ಬಂದು ಭೋದನೆ ಮಾಡಿದ್ದಾರೆ. ಅಲ್ಲದೆ ಎಲ್ಲ ರಾಜಕೀಯ ಪಕ್ಷದ ನಾಯಕರು ಧಾರ್ಮಿಕ ಸಮಾವೇಶಕ್ಕೆ ಬಂದಿದ್ದಾರೆ. ಒಂದು ಧರ್ಮದ ಬಗ್ಗೆ ಯತ್ನಾಳ ಹಗುರವಾಗಿ ಮಾತನಾಡಬಾರದು ಎಂದು ಹಿಂಡಸಗೇರಿ ಎಚ್ಚರಿಕೆ ನೀಡಿದರು.
ಐಸಿಸ್ ನಂಟು ಇರುವವರು ಬಂದವರು ಯಾರು ಎಂದು ಯತ್ನಾಳ ಸ್ಪಷ್ಟಪಡಿಸಬೇಕು ಎಂದು ಹಿಂಡಸಗೇರಿ ಆಗ್ರಹಿಸಿದ್ದಾರೆ.
