ಇದು ಹಾಸ್ಯಸ್ಪದ ಮತ್ತು ಕುಹಕದ ಮಾತು ಅಂತ ಅಂದ್ರು ಸಹ ಒಂದು ಕ್ಷಣ ಯೋಚನೆ ಮಾಡುವ ವಿಚಾರ. ಸೈಕಲ ತುಳಿಯೋದರಿಂದ ಮನುಷ್ಯ, ಆರೋಗ್ಯಕರವಾಗಿರಬಹುದು ಆದರೆ ಆರ್ಥ ವ್ಯವಸ್ಥೆಗೆ ಅದು ಹಾನಿಕರವಂತೆ
ಅದು ಹೇಗೆ ಅಂತೀರಾ?
ಸೈಕಲ್ ತುಳಿಯೋನು ಗಾಡಿ ಖರೀದಿಸಲ್ಲ. ಅವನು ಸಾಲ ಪಡೆಯೋದಿಲ್ಲ, ಗಾಡಿಯ ವಿಮೆ ಮಾಡಿಸಲ್ಲ, ಪೆಟ್ರೋಲ್ ಖರೀದಿಸಲ್ಲ, ಗಾಡಿಯ ಸರ್ವಿಸಿಂಗ್ ಮಾಡಿಸಲ್ಲ, ಹೆಲ್ಮೆಟ್, ಲೈಸೆನ್ಸ್ ಅಂತ ದಂಡ ಕಟ್ಟಲ್ಲ, ಸೈಕಲ್ ತುಳಿಯೋನು ದಪ್ಪ ಆಗಲ್ಲ.
ಹೌದು ಇದು ಸತ್ಯ! ಆರೋಗ್ಯಪೂರ್ಣ ವ್ಯಕ್ತಿ ಎಂದಿಗೂ ಅರ್ಥ ವ್ಯವಸ್ಥೆಗೆ ಮಾರಕವಾಗುತ್ತಾನೆ. ಆರೋಗ್ಯಪೂರ್ಣ ವ್ಯಕ್ತಿ ಔಷಧ ಖರೀದಿಸಲಾರ, ಅವನು ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗೋದಿಲ್ಲ.
ಅದೇ ಒಬ್ಬ ಫಾಸ್ಟ್ ಫುಡ್ ಅಂಗಡಿಯವ 30 ಜನರಿಗೆ ಉದ್ಯೋಗ ಕಲ್ಪಿಸುತ್ತಾನೆ. 10 ಜನ ಹೃದಯ ಚಿಕಿತ್ಸಕರನ್ನು, 10 ಜನ ದಂತ ಚಿಕಿತ್ಸಕರನ್ನು, 10 ಜನ ತೂಕ ಕಡಿಮೆ ಮಾಡುವವರಿಗೆ ಉದ್ಯೋಗ ಸೃಷ್ಟಿ ಮಾಡುತ್ತಾನೆ.
ಅದರಲ್ಲೂ ನಡದೆ ಹೋಗುವವರು, ಸೈಕಲ್ ತುಳಿಯೋರಿಗಿಂತ ಖತರ್ನಾಕ್ ಅಂತೆ. ಅವರು ಸೈಕಲ್ಲನ್ನು ಖರೀದಿಸೋಲ್ಲ!! ಅವರು ಫುಲ್ ಆರೋಗ್ಯವಂತರಾಗಿರುತ್ತಾರಂತೆ