ಮೊನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. 68 ನೇ ಹುಟ್ಟುಹಬ್ಬ ಆಚರಿಸಿಕೊಂಡ ಶೆಟ್ಟರಗೆ ಬಸವರಾಜ ಹೊರಟ್ಟಿ ಪೇಟ ತೊಡಿಸಿ ಶಾಲು ಹಾಕಿ ಶುಭಾಶಯ ಕೋರಿದರು. ಇಬ್ಬರು ದಿಗ್ಗಜ ನಾಯಕರು ಕೆಲ ಹೊತ್ತು ಉಭಯ ಕುಶಲೋಪರಿ ವಿನಿಮಯ ಮಾಡಿಕೊಂಡರು
