ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ಭಾರತ ಜೋಡೋ ಯಾತ್ರೆ ನಡೆಸಿ ಗಮನ ಸೆಳೆದಿದ್ದ ರಾಹುಲ್ ಗಾಂಧಿ ಇದೀಗ ಮತ್ತೊಂದು ಯಾತ್ರೆಗೆ ಅಣಿಯಾಗಿದ್ದಾರೆ.
ಭಾರತ ನ್ಯಾಯ ಯಾತ್ರಾ ಎಂಬ ಘೋಷ ವ್ಯಾಕ್ಯ ಇಟ್ಟುಕೊಂಡು ರಾಹುಲ್ ಗಾಂಧಿ ಈ ಸಲ ಮಣಿಪುರ ಟು ಮುಂಬೈ ಯಾತ್ರೆ ಕೈಗೊಳ್ಳಳಿದ್ದಾರೆ. ಈ ಭಾರತ ನ್ಯಾಯ ಯಾತ್ರೆ ಮಣಿಪುರದಿಂದ ಜನೇವರಿ 14 ರಿಂದ ಆರಂಭಗೊಂಡು ಮಾರ್ಚ 20 ಕ್ಕೆ ಮುಂಬೈ ತಲುಪಲಿದೆ. 14 ರಾಜ್ಯಗಳಲ್ಲಿ ಹಾಯ್ದು ಹೋಗುವ ಈ ಯಾತ್ರೆ 85 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಒಟ್ಟು 6200 ಕಿಲೋಮೀಟರ್ ಸಂಚರಿಸಲಿರುವ ಈ ಪಾದಯಾತ್ರೆ ಕಾಂಗ್ರೇಸ್ಸಿಗರಲ್ಲಿ ಹೊಸ ಹುರುಪು ತರಲಿದೆ.