ಭಾರತ ಕ್ರಿಕೇಟ್ ತಂಡದ ವೇಗಿ, ಖ್ಯಾತ ಕ್ರಿಕೆಟಿಗ್ ಮೊಹಮ್ಮದ್ ಶಮಿ ತಮಗೆ ದೊರೆತ ಪ್ರತಿಷ್ಟಿತ ಅರ್ಜುನ ಪ್ರಶಸ್ತಿಯನ್ನು ತಮ್ಮ ತಾಯಿಗೆ ಸಮರ್ಪಿಸಿದ್ದಾರೆ. ತಾಯಿ ಅಂಜುಮ ಕೈಗೆ ಅರ್ಜುನ ಪ್ರಶಸ್ತಿ ಅರ್ಪಿಸಿದ ಬಳಿಕ ತಾಯಿ ಮತ್ತು ಮಗ ಇಬ್ಬರು ಭಾವುಕರಾಗಿದ್ದಾರೆ.
ನಿನ್ನೆಯಷ್ಟೇ ರಾಷ್ಟ್ರಪತಿಗಳಿಂದ ಅರ್ಜುನ ಪ್ರಶಸ್ತಿ ಪಡೆದಿರುವ ಮೊಹಮ್ಮದ್ ಶಮಿ, ಅರ್ಜುನ ಪ್ರಶಸ್ತಿಯಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
