ರಾಜ್ಯ ಕಾಂಗ್ರೇಸ್ ಸರ್ಕಾರದ 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಶೈಕ್ಷಣಿಕ ಕಾಶಿ ಧಾರವಾಡದಲ್ಲಿ ನೀರಸ ಪ್ರತಿಕ್ರಿಯೆ ಉಂಟಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಇವರೆಗೆ ಕೇವಲ 2091 ಅರ್ಜಿಗಳು ಮಾತ್ರ ಸ್ವಿಕೃತವಾಗಿವೆ. ಜಿಲ್ಲೆಯ ಪದವೀಧರರಿಗೆ ಹೋಲಿಸಿದರೆ ಕಡಿಮೆ ನೋಂದಣಿಯಾಗಿದ್ದು, ಈ ಯೋಜನೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲು ಉನ್ನತ ಶಿಕ್ಷಣ ಇಲಾಖೆಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ ಹೆಗಡೆ ತಿಳಿಸಿದ್ದಾರೆ.
ಗೊಂದಲ ನಿವಾರಣೆಗಾಗಿ ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದ್ದು, ಪದವೀಧರರು 18005999918 ಗೆ ಕರೆ ಮಾಡಬಹುದಾಗಿದೆ.