Download Our App

Follow us

Home » ಅಪರಾಧ » ಯೋಗೀಶಗೌಡ ಕೊಲೆ ಪ್ರಕರಣ, ವಿನಯ ವಿರುದ್ಧದ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ ನಿರಾಕರಣೆ

ಯೋಗೀಶಗೌಡ ಕೊಲೆ ಪ್ರಕರಣ, ವಿನಯ ವಿರುದ್ಧದ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ ನಿರಾಕರಣೆ

ಹೆಬ್ಬಳ್ಳಿ ಜಿಲ್ಲಾ ಪಂಚಾಯತ ಬಿಜೆಪಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ ಹೇಳಿದೆ. ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯ ಜನೇವರಿ 29 ರಿಂದ ಫೆಬ್ರುವರಿ 1 ರ ವರೆಗೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ತನ್ನ ವಿರುದ್ಧದ ಆರೋಪಪಟ್ಟಿ ಮತ್ತು ನ್ಯಾಯಿಕ ಪ್ರಕ್ರಿಯೆಗೆ ತಡೆ ಕೋರಿ ವಕೀಲರ ಮೂಲಕ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ವಿನಯ ಕುಲಕರ್ಣಿಯವರ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ ಅವರು ವಿಚಾರಣಾಧಿನ ನ್ಯಾಯಾಲಯ ತನ್ನ ಪ್ರಕ್ರಿಯೆ ಆರಂಭಿಸಲು ದಿನಾಂಕ ನಿಗದಿಪಡಿಸಿದ್ದು ಇದಕ್ಕೆ ಮಧ್ಯಂತರ ತಡೆ ನೀಡಬೇಕೆಂದು ಎಂದು ಕೋರಿದ್ದರು. ತಡೆ ಅರ್ಜಿ ತಳ್ಳಿಹಾಕಿದ ಪೀಠ, ಪ್ರತಿವಾದಿ ಸಿ ಬಿ ಐ ಗೆ ನೋಟಿಸ್ ಜಾರಿ ಮಾಡಲು ಆದೇಶ ನೀಡಿತು. ಮತ್ತು ವಿಚಾರಣೆಯನ್ನು ಜನೇವರಿ 19 ಕ್ಕೆ ಮುಂದೂಡಿತು.

ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ 2016 ರ ಜೂನ್ 15 ರಂದು ನಡೆದಿದ್ದ ಯೋಗೀಶಗೌಡ ಕೊಲೆ ಕೇಸಿನಲ್ಲಿ ಸಿ ಬಿ ಐ ತನಿಖೆ ನಡೆಸಿ, ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಜನೇವರಿ 29 ರಿಂದ ಫೆಬ್ರುವರಿ 1 ರ ವರೆಗೆ ನಿಯಮಿತವಾಗಿ ವಿಚಾರಣೆ ನಡೆಸಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಸ್ಪೋಟಕ ಬ್ಯಾಟ್ಸಮನ್ ಬದುಕಿನಲ್ಲಿ ಸ್ಪೋಟಕ ತಿರುವು. ಡೈವೋರ್ಸ್…

ಸ್ಪೋಟಕ ಬ್ಯಾಟಿಂಗ್ ಶೈಲಿಗೆ ಹೆಸರಾಗಿದ್ದ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ  ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಆರತಿ ಅಹ್ಲಾವತ್ ರ 20 ವರ್ಷಗಳ ದಾಂಪತ್ಯದ

Live Cricket

error: Content is protected !!