ರಾಜ್ಯ ಕಾಂಗ್ರೇಸ್ ಸರ್ಕಾರದ ಬಹು ನಿರೀಕ್ಷಿತ ನಿಗಮ ಮಂಡಳಿ ನೇಮಕದ ಪಟ್ಟಿ ಯಾವದೇ ಕ್ಷಣದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಕಾಂಗ್ರೇಸ್ ಮೂಲಗಳು ತಿಳಿಸಿವೆ. ಧಾರವಾಡ ಜಿಲ್ಲೆಗೆ ಒಟ್ಟು ಮೂರು ನಿಗಮಗಳ ಅಧ್ಯಕ್ಷಗಿರಿಗೆ ಹೆಸರು ಅಂತಿಮಗೊಂಡಿದೆ.
ಧಾರವಾಡ ಗ್ರಾಮೀಣ ಶಾಸಕ, ಮಾಜಿ ಸಚಿವ ವಿನಯ ಕುಲಕರ್ಣಿ, ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮತ್ತು 2018 ರ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿಯವರಿಗೆ ನಿಗಮದ ದಾರಿ ಸುಗಮವಾಗಿದೆ.
ಬಹುತೇಕ ಕಾಂಗ್ರೇಸ್ಸಿನ ಮುಖಂಡರು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದು, ನೇಮಕದ ಅಧಿಕೃತ ಆದೇಶದ ಪ್ರತಿಗೆ ಕಾಯುತ್ತಿದ್ದಾರೆ. ಮತ್ತೊಂದೆಡೆ, ಅಭಿಮಾನಿಗಳಲ್ಲಿ ಕಾತರ ಹೆಚ್ಚಾಗುತ್ತಿದ್ದು, ನೇಮಕದ ಆದೇಶ ಪಟ್ಟಿ ಹೊರಬೀಳುತ್ತಿದ್ದಂತೆ ಸಂಭ್ರಮಿಸಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ.