ಜಗದೀಶ್ ಶೆಟ್ಟರ್ ಘರ್ ವಾಪ್ಸಿ ಬಳಿಕ ಬಿಜೆಪಿಯಿಂದ ಧಾರವಾಡ ಅಥವಾ ಹಾವೇರಿ ಜಿಲ್ಲೆಯಿಂದ ಸ್ಪರ್ಧಿಸ್ತಾರೆ ಎಂಬ ಬಿಸಿಬಿಸಿ ಚರ್ಚೆಗಳು ಆರಂಭವಾಗಿದ್ದವು. ಆದ್ರೆ ಅಂತಿಮವಾಗಿ ಶೆಟ್ಟರ್ ಎರಡು ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ ಬಳಿಕ ಶೆಟ್ಟರ್ ಅವರನ್ನು ಬೆಳಗಾವಿಯಿಂದ ಸ್ಪರ್ದಿಸುವಂತೆ ಪಕ್ಷದ ಪ್ರಮುಖರು ಸಲಹೆ ನೀಡಿದ ಬಳಿಕ ಶೆಟ್ಟರ್, ಬೆಳಗಾವಿಯಿಂದ ಸ್ಪರ್ಧಿಸಲು ಒಪ್ಪಿಕೊಂಡಿದ್ದರು. ಇನ್ನೇನು ಅಧಿಕೃತ ಘೋಷಣೆಯಷ್ಟೇ ಬಾಕಿ ಇತ್ತು. ಆದ್ರೆ ಇದರ ಮಧ್ಯೆ ಶೆಟ್ಟರ್ ಟಿಕೆಟ್ ತಪ್ಪಿಸಲು ಭರ್ಜರಿ ಪ್ಲಾನ್ ಹೆಣೆಯಲಾಗಲಿದೆ ಎಂಬ ಸುದ್ದಿ ತಡರಾತ್ರಿ ಹೊರಬಿದ್ದಿದೆ.
ಜಗದೀಶ್ ಶೆಟ್ಟರ್ ಗೆ ಬೆಳಗಾವಿಯಲ್ಲಿ ವಿರೋಧ ಎಂದು ಬಿಂಬಿಸಲು ತಡರಾತ್ರಿ ಹೈಡ್ರಾಮಾ..!
ದೆಹಲಿಗೆ ದೌಡಾಯಿಸಿದ ಜಗದೀಶ್ ಶೆಟ್ಟರ್..!
ಸಂತೋಷ ಬುಲಾವ ಮೇರೆಗೆ ದೆಹಲಿ ತಲುಪಿದ ಯತ್ನಾಳ.
ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ ಸ್ಪರ್ಧೆ ಮಾಡಿದರೆ, ಸೋಲ್ತಾರೆ ಎಂದು ಬಿಂಬಿಸಲು ಯತ್ನಾಳ ಅವರನ್ನು ದೆಹಲಿಗೆ ಕರೆಸಲಾಗಿದೆ ಎನ್ನಲಾಗಿದೆ. ಅದಕ್ಕೂ ಪೂರ್ವಭಾವಿಯಾಗಿ ಬೆಳಗಾವಿಯಲ್ಲಿ ಶೆಟ್ಟರ್ ವಿರೋಧಿ ಬಣದ ಸಭೆ ನಡೆಸಲಾಗಿದೆ. ಬಿ.ಎಲ್ ಸಂತೋಷ ಬಣದ ಈರಣ್ಣ ಕಡಾಡಿ, ಪ್ರಹ್ಲಾದ ಜೋಶಿ ಆಪ್ತ ಎಂದು ಬಿಂಬಿತವಾಗಿರುವ ಅಭಯ ಪಾಟೀಲ್ ನಿನ್ನೆ ಪ್ರಭಾಕರ್ ಕೋರೆ ನಿವಾಸದಲ್ಲಿ ಸಭೆ ನಡೆಸಿ ಸ್ಥಳಿಯರಿಗೆ ಟಿಕೆಟ್ ನೀಡಬೇಕು ಎಂದು ಹೇಳಿಕೆ ನೀಡಿದ್ದರು. ಇದರ ಮಧ್ಯೆ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ದೆಹಲಿಗೆ ಕರೆಸಿಕೊಳ್ಳಲಾಗಿದೆ. ಶೆಟ್ಟರ್ ವಿರುದ್ಧ ಯತ್ನಾಳ ಅವರನ್ನ ಚೂ ಬಿಡುವ ಪ್ಲಾನ್ ಹೆಣೆಯಲಾಗಿದೆ ಎಂಬ ಗುಸುಗುಸು ಸುದ್ದಿ ಹರಿದಾಡುತ್ತಿದೆ.
ಬೆಳಗಾವಿ ಕ್ಷೇತ್ರ ಜಗದೀಶ್ ಶೆಟ್ಟರ್ ಗೆ ಪೂರಕವಾಗಿಲ್ಲ, ಪಂಚಮಸಾಲಿ ಸಮುದಾಯಕ್ಕೆ ನೀಡಿದ್ರೆ ಗೆಲ್ಲಬಹುದು ಎಂಬುದನ್ನು ಬಿಂಬಿಸಲು ಪ್ಲಾನ್ ಹೆಣೆಯಲಾಗಿದೆ ಎನ್ನಲಾಗಿದೆ.
ನಾಳೆ ಸಂಜೆ ದೆಹಲಿಯಲ್ಲಿ ಸಂಸದಿಯ ಮಂಡಳಿ ಸಭೆ ನಡೆಯಲಿದ್ದು ಸಭೆಗೂ ಮುನ್ನ ಶೆಟ್ಟರ ಟಿಕೆಟ್ ಕೈ ತಪ್ಪಿಸುವ ಯೋಜನೆ ರೂಪಿಸಲಾಗಿದೆ ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಜಗದೀಶ್ ಶೆಟ್ಟರ್ ಗೆ ಟಿಕೆಟ ಕೈ ತಪ್ಪಿದಾಗ ಬಂಡೆದ್ದು ಶೆಟ್ಟರ ಕಾಂಗ್ರೆಸ್ ಸೇರಿದ್ದರು, ತಮಗೆ ಟಿಕೆಟ್ ಕೈ ತಪ್ಪಲು ಬಿ.ಎಲ್‌ಸಂತೋಷ ಕಾರಣ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೆ ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷ ಹೀನಾಯವಾಗಿ ಸೋತು, ಬಿ.ಎಲ್‌ಸಂತೋಷ ಪ್ಲಾನ್ ನಿಂದಲೇ ಪಕ್ಷಕ್ಕೆ ಸೋಲಾಯಿತು ಎಂಬ ವರದಿಗಳು ಹರಿದಾಡಿದ್ದವು. ಈಗ ಶೆಟ್ಟರ್ ಪುನಃ ಪಕ್ಷಕ್ಕೆಮರಳಿದ್ದು ಬೆಳಗಾವಿ ಸ್ಪರ್ಧಿಸಲು ತಯಾರಿನಡೆಸಿದ್ದಾರೆ.
ಯಾವುದೇ ಕಾರಣಕ್ಕು ಜಗದೀಶ್ ಶೆಟ್ಟರ್ ಟಿಕೆಟ್ ದೊರೆಯದಂತೆ ನೋಡಿಕೊಳ್ಳುವ ಪ್ಲಾನ್ ರೂಪಿಸಲಾಗಿದೆಯಂತೆ. ಸಂಸದೀಯ ಮಂಡಳಿ ಸಭೆಗೂ ಮುನ್ನ ಕ್ಷೇತ್ರದಲ್ಲಿ ಮತ್ತೊಂದು ಸರ್ವೆ ವರದಿ ತರಿಸಿಕೊಳ್ಳಲು ಸಂತೋಷ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಮತ್ತೊಂದಡೆ ಶೆಟ್ಟರ್ ಗೆ ಒಂದು ವೇಳೆ ಟಿಕೆಟ್ ಗಿಟ್ಟಿಸಿಕೊಂಡು ಗೆದ್ದುಬಂದ್ರೆ ಕೇಂದ್ರದಲ್ಲಿ ಮಂತ್ರಿಯಾಗುವ ಸಾದ್ಯತೆಗಳಿವೆ. ಇದನ್ನು ತಪ್ಪಿಸಲು ಬಸವಗೌಡ ಪಾಟೀಲ್ ಯತ್ನಾಳಗೆ ಟಿಕೆಟ್ ಆಮಿಷ ಒಡ್ಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.