ಬೆಳಗಾವಿ ಟಿಕೇಟ್ ಹಂಚಿಕೆಯಲ್ಲಿ ಯಾವದೇ ಕಗ್ಗಂಟುಗಳಿಲ್ಲ. ಬೆಳಗಾವಿ ಇಂದ ಸ್ಪರ್ಧೆ ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನನಗೆ ಬೆಳಗಾವಿಯಿಂದ ಸ್ಪರ್ಧೆ ಮಾಡಲು ಅಲ್ಲಿಯ ನಾಯಕರು ಆಹ್ವಾನ ನೀಡುತ್ತಿದ್ದಾರೆ ಎಂದು ಶೆಟ್ಟರ ತಿಳಿಸಿದ್ದಾರೆ.
ನನಗೆ ಟಿಕೇಟ್ ಸಿಗತ್ತೆ ಅನ್ನೋ ನಂಬಿಕೆ ಇದೆ ಎಂದ ಅವರು ರಾಜ್ಯ ಸರ್ಕಾರದ ಗ್ಯಾರೆಂಟಿ ನೋಡಿ ಯಾರು ವೋಟ್ ಹಾಕಲ್ಲ, ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಿ ಜನ ವೋಟ ಹಾಕುತ್ತಾರೆ ಎಂದು ತಿಳಿಸಿದರು. ಮಹಿಳೆಯರಿಗೆ ನ್ಯಾಯ ಒದಗಿಸಿದ್ದು, ನಮ್ಮ ಬಿಜೆಪಿ. ನರೇಂದ್ರ ಮೋದಿಯವರು ಮಹಿಳಾ ಮೀಸಲಾತಿ ತರುತ್ತಿದ್ದಾರೆ ಎಂದರು. ಇಂದು ಅಥವಾ ನಾಳೆ ಟಿಕೇಟ ಘೋಷಣೆಯಾಗತ್ತೆ. ಬೆಳಗಾವಿಯಿಂದ ನಾನು ಸ್ಪರ್ಧೆ ಮಾಡುತ್ತೇನೆ ಎಂದರು.
