ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಿಡುವಿಲ್ಲದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳಗಾವಿಯಲ್ಲಿ ಪಕ್ಷದ ಪದಾಧಿಕಾರಿಗಳ ಜೊತೆ ಸಭೆ ನಡೆಸಿರುವ ಜಗದೀಶ ಶೆಟ್ಟರಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.
ನಾಳೆ ಬೆಳಗಾವಿಯಲ್ಲಿ ಚಾಯ್ ಪೇ ಚರ್ಚಾ ಕಾರ್ಯಕ್ರಮ ಹಮ್ಮಿಕೊಂಡಿರುವ ಶೆಟ್ಟರ, ವಾಯು ವಿಹಾರಿಗಳ ಜೊತೆ ಬೆರೆಯಲಿದ್ದಾರೆ. ನಾಳೆ ಶುಕ್ರವಾರದಂದು ಬೆಳಿಗ್ಗೆ 6 ಘಂಟೆಗೆ ರೇಸ್ ಕೋರ್ಸ್ ವಾಕಿಂಗ್ ಟ್ರ್ಯಾಕ್, ಹನುಮಾನ ನಗರ ಸರ್ಕಲ್, ಹಿಂಡಲಗಾ ಕಾರಾಗೃಹ ಬಳಿ ಇರುವ ಗಣಮತಿ ಮಂದಿರ ಎದುರು ಚಾಯ್ ಪೇ ಚರ್ಚಾ ನಡೆಸಿ, ಪ್ರಚಾರ ನಡೆಸಲಿದ್ದಾರೆ.