ಕನ್ನಡ ದೃಶ್ಯ. ಮಾಧ್ಯಮದಲ್ಲಿ ಕ್ಯಾಮರ ಮ್ಯಾನ್ ಆಗಿ ಹೆಸರು ಮಾಡಿರುವ ಶಿವಶಂಕರ ಅವರ ಮಗ ಪುನೀತ್ UPSC ಪರೀಕ್ಷೆಯಲ್ಲಿ 795 ಶೇಯಾಂಕ ಪಡೆದು ಆಯ್ಕೆಯಾಗಿದ್ದಾರೆ.
ಕರ್ನಾಟಕ,ದೆಹಲಿ ಸೇರಿದಂತೆ ವಿವಿಧ ನ್ಯೂಸ್ ಚಾನೆಲ್ ನಲ್ಲಿ ಕ್ಯಾಮರ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಶಿವಶಂಕರ ಅವರ ಮಗನಾಗಿರುವ ಪುನೀತ್ ಈ ಸಾಧನೆ ಮಾಡಿದ್ದು, ಅಪಾರ ಸಂಖ್ಯೆಯಲ್ಲಿ ಜನ ಪುನೀತರನ್ನು ಅಭಿನಂದಿಸಿದ್ದಾರೆ. ಶಿವಶಂಕರ ಸಾಮಾನ್ಯ ಕುಟುಂಬದಿಂದ ಬಂದಿದ್ದು, ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.