ರೈತ ಬಂಡಾಯದ ನೆಲ ನವಲಗುಂದದಲ್ಲಿಂದು ಫಕೀರ ದಿಂಗಾಲೇಶ್ವರ ಶ್ರೀಗಳು ಬೃಹತ್ ಸಭೆ ನಡೆಸಿದ್ರು. ಬಿಜೆಪಿ ಅಭ್ಯರ್ಥಿ ಪ್ರಲ್ಲಾದ ಜೋಶಿಯವರ ವಿರುದ್ಧ ಧರ್ಮಯುದ್ಧ ಸಾರಿರುವ ಶ್ರೀಗಳು, ಜಿಲ್ಲೆಯಲ್ಲಿ ದ್ವೇಷ ರಾಜಕಾರಣ ಕೊನೆಗೊಳಿಸಲು, ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಬೇಕೆಂದು ಸೂಚಿಸಿದ್ರು.
ನಾನು ಯಾವದೇ ಪಕ್ಷದ ವಿರುದ್ಧ ಅಥವಾ ಪರವಾಗಿ ಇಲ್ಲ. ಆದ್ರೆ ನಾನು ಈ ಸಲ ಒಬ್ಬ ವ್ಯಕ್ತಿಯ ನಡವಳಿಕೆ ವಿರುದ್ಧ ಧರ್ಮಯುದ್ದ ಸಾರಿದ್ದೇನೆ ಎಂದರು. ಲಿಂಗಾಯತರು ಸೇರಿದಂತೆ ಅನೇಕ ವರ್ಗದ ಭಕ್ತರು ಅನ್ಯಾಯಕ್ಕೂಳಗಾಗಿದ್ದಾರೆ. ಜೋಶಿಯವರ ಬದಲು ಬೇರೆ ಅಭ್ಯರ್ಥಿ ಹಾಕುವಂತೆ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದೆ, ಆದ್ರೆ ಅವರು ಅಭ್ಯರ್ಥಿ ಬದಲಾಯಿಸದ ಕಾರಣ ಜನರಲ್ಲಿ ಜಾಗೃತಿ ಮೂಡಿಸಿ, ಲೋಕಸಭಾ ಅಭ್ಯರ್ಥಿ ಬದಲಾವಣೆ ಮಾಡುವಂತೆ ಸಂಚಾರ ಕೈಗೊಂಡಿದ್ದೇವೆ ಎಂದು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಸ್ವಾಭಿಮಾನಿ ಮತದಾರರ ಸಮಾವೇಶದಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ವೇದಿಕೆ ಮೇಲೆ ಅನೇಕ ಮಠಗಳ ಶ್ರೀಗಳು ಉಪಸ್ಥಿತರಿದ್ದರು.