ಉತ್ತರ ಪ್ರದೇಶದ ರಾಯಬರೇಲಿಯಲ್ಲಿಂದು ಸೋನಿಯಾ ಗಾಂಧಿ ಭಾವನಾತ್ಮಕ ಭಾಷಣ ಮಾಡಿದ್ರು. ನನ್ನ ಕುಟುಂಬಕ್ಕೆ ಆಶೀರ್ವಾದ ಮಾಡಿದ ರಾಯಬರೇಲಿಗೆ ಮಗ ರಾಹುಲ್ ನನ್ನ ಧಾರೆ ಎರೆಯುತ್ತಿದ್ದೇನೆ. ಆತನನ್ನು ಎತ್ತಿಕೊಳ್ಳಿ ಎಂದು ಮನವಿ ಮಾಡಿದರು.
2004 ರಿಂದ ಸತತವಾಗಿ ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುತ್ತ ಬಂದಿರುವ ಸೋನಿಯಾ ಗಾಂಧಿ ಇದೆ ಮೊದಲ ಬಾರಿಗೆ ಆ ಕ್ಷೇತ್ರವನ್ನು ಮಗ ರಾಹುಲ್ ಗಾಂಧಿಗೆ ಬಿಟ್ಟು ಕೊಟ್ಟಿದ್ದಾರೆ.
ನೀವು ನನಗೆ ಕಲಿಸಿದ ರಾಜಕೀಯ ಹಾಗೂ ಮಾನವೀಯ ಪಾಠವನ್ನು ರಾಹುಲ್ ಗಾಂಧಿಗೆ ಹೇಳಿ ಕೊಟ್ಟಿದ್ದೇನೆ ಎಂದ ಸೋನಿಯಾ ಗಾಂಧಿ, ರಾಯಬರೇಲಿ ನನ್ನ ದೊಡ್ಡ ಆಸ್ತಿ ಎಂದರು