ಭಾರಿ ಕುತೂಹಲ ಮೂಡಿಸಿದ್ದ ಧಾರವಾಡ ಲೋಕಸಭಾ ಚುನಾವಣೆ ಮುಗಿದಿದೆ. ಚುನಾವಣೆ ಮುಗಿದ ಬಳಿಕ, ಬೀಳುವ ಮತಗಳ ಬಗ್ಗೆ ಚರ್ಚೆ ನಡೆಯುತ್ತಿರುವ ಮಧ್ಯೆಯೇ, ವಿನೋದ ವಿರುದ್ಧ ಕೆಲಸ ಮಾಡಲು ಬುಕ್ ಆಗಿದ್ದ ಕಾಂಗ್ರೇಸ್ಸಿನ ಆ ಐದು ಜನ ಮಾಡಿದ ಘನಂದಾರಿ ಕೆಲಸಗಳ ಬಗ್ಗೆ ಗುಸುಗುಸು ಮಾತುಗಳು ಆರಂಭವಾಗಿವೆ.
ಇದೇ ಮೊದಲ ಬಾರಿಗೆ ಹತ್ತಾರು ಗುಂಪುಗಳಲ್ಲಿ ಹಂಚಿ ಹೋಗಿದ್ದ ಕಾಂಗ್ರೇಸ್ಸಿಗರು ಒಂದಾಗಿ, ಒಟ್ಟಾಗಿ ಚುನಾವಣೆ ಮಾಡಿದ್ದಾರೆ. ಒಗ್ಗಟ್ಟು ಒಡೆದು, ಹುಳಿ ಹಿಂಡುವ ಕೆಲಸಕ್ಕೆ ಹುಬ್ಬಳ್ಳಿಯ ಓರ್ವ ಮುಖಂಡ ನೇತೃತ್ವ ವಹಿಸಿ, ಬುಕ್ ಆಗಿದ್ದ ಅನ್ನೋದು ಗುಟ್ಟಾಗಿ ಉಳಿಯುತ್ತಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಅಂದಂಗೆ, ಆ ಐದು ಜನ ಮತ್ತು ಐದು ಲಕ್ಷದ ಬಗ್ಗೆ ಜನ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ.
ಕಾಂಗ್ರೇಸ್ ಪಕ್ಷದಲ್ಲಿದ್ದುಕೊಂಡು ಯಾರೇ ಪಕ್ಷ ವಿರೋಧಿ ಕೆಲಸ ಮಾಡಿದರು, ಯಾವದೇ ಪರಿಣಾಮ ಬಿದ್ದಿಲ್ಲ ಅನ್ನೋದು ಪಕ್ಷದ ಮುಖಂಡರಿಗೂ ಗೊತ್ತಾಗಿದೆ
ಹುಬ್ಬಳ್ಳಿಯ ನಾಲ್ಕು ಜನ, ಧಾರವಾಡದ ಒಬ್ಬ ಮುಖಂಡ, ಕಾಂಗ್ರೇಸ್ ಪಾಳಯದಲ್ಲಿ ಬಿರುಕು ಮೂಡಿಸಲು ಯತ್ನಿಸಿದ್ದು, ಕರ್ನಾಟಕ ಫೈಲ್ಸ್ ಧಾಖಲೆ ಸಹಿತ ಸುದ್ದಿ ಪ್ರಕಟ ಮಾಡಲಿದೆ.