ನೇಪಾಳ ಹಾಗೂ ಚೈನಾ ಆಕ್ರಮಿತ ಟಿಬೇಟ್ ನಡುವೆ ಇರುವ ಮೌಂಟ ಎವರೆಸ್ಟ್ ಏರಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ. ಮೌಂಟ ಎವರೆಸ್ಟ್ ಇದೀಗ ರೇಲ್ವೆ ಸ್ಟೇಷನ್ ನಂತಾಗಿದೆ.
ಮೌಂಟ್ ಎವರೆಸ್ಟ್‌ನ ಪ್ರಸ್ತುತ ಅಧಿಕೃತ ಅಳತೆ ಎತ್ತರವು ಸಮುದ್ರ ಮಟ್ಟದಿಂದ 8848 ಮೀಟರ್ (29029 ಅಡಿ) ಆಗಿದೆ. ಪ್ರಬಲ ಎವರೆಸ್ಟ್‌ನ ಈ ಎತ್ತರವನ್ನು 1955 ರಲ್ಲಿ ಭಾರತೀಯ ಸಮೀಕ್ಷೆಯಿಂದ ಅಳೆಯಲಾಗಿತ್ತು. ಇದನ್ನು 1975 ರಲ್ಲಿ ಚೀನೀ ಸಮೀಕ್ಷೆಯಿಂದ ಗುರುತಿಸಲಾಯಿತು. ಅಂದಿನಿಂದ ಎವರೆಸ್ಟ್ ಪರ್ವತವು ಭೂಮಿಯ ಮೇಲಿನ ಅತಿ ಎತ್ತರದ ಪರ್ವತ ಶಿಖರವೆಂದು ದಾಖಲಿಸಲ್ಪಟ್ಟಿದೆ.
ಮೇ ಅಂತ್ಯದಿಂದ ಸೆಪ್ಟೆಂಬರ್ ವರೆಗೆ ಸುರಿಯುವ ಮಳೆಯು ಇಲ್ಲಿ ಹಿಮವಾಗಿ ಬೀಳುತ್ತದೆ.
ಮೌಂಟ್ ಎವರೆಸ್ಟ್ ಏರಲು ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದು, ಈ ಮೇ ತಿಂಗಳಲ್ಲಿಯೇ 250 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.