ಲೋಕಸಭೆಗೆ ನಡೆದ 7 ಹಂತದ ಮತದಾನ ಇಂದು ಕೊನೆಗೊಳ್ಳಲಿದೆ. ಇಂದು ಸಂಜೆ 7 ರ ನಂತರ ವಿವಿಧ ಖಾಸಗಿ ಸಂಸ್ಥೆಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಬಹಿರಂಗಗೊಳ್ಳಲಿದೆ.
543 ಸ್ಥಾನಗಳಿಗೆ ಇಂಡಿಯಾ ಹಾಗೂ ಎನ್ ಡಿ ಎ ನಡುವೆ ಜಿದ್ದಾಜಿದ್ದಿನ ಚುನಾವಣಾ ಕದನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವದನ್ನು ತಪ್ಪಿಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಭಾರಿ ಕಸರತ್ತು ನಡೆಸಿತ್ತು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸಹ ದೇಶದಲ್ಲಿ ಉದ್ದಗಲಕ್ಕೂ ಸಂಚರಿಸಿ ಎನ್ ಡಿ ಎ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ್ದರು.
ಇಂದು ನಡೆದಿರುವ 7 ಹಂತದ ಮತದಾನದ ಬಳಿಕ ಮತಗಟ್ಟೆ ಸಮೀಕ್ಷೆ ಬಹಿರಂಗ ಮಾಡಬೇಕು ಎಂದು ಚುನಾವಣಾ ಆಯೋಗ ಸೂಚನೆ ನೀಡಿದ್ದು, ಸಂಜೆ 6-30 ರ ಬಳಿಕ ಸಮೀಕ್ಷೆ ಬಹಿರಂಗಗೊಳ್ಳಲಿದೆ.
ಮತಗಟ್ಟೆ ಸಮೀಕ್ಷೆ ಮತದಾರರ ಅಭಿಪ್ರಾಯದ ಮೇಲೆ ಕ್ರೂಡಿಕೃತವಾಗಿದ್ದು, ಕೆಲವೊಂದು ಸಲ ಸಮೀಕ್ಷೆ ಸುಳ್ಳು ಆಗಿರುವ ಸಂದರ್ಭ ನಮ್ಮ ಕಣ್ಮುಂದೆ ಇದೆ.