ನಾಳೆ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಮತ್ತೆ ಪ್ರಧಾನಿಯಾಗಲಿ ಎಂದು ಮುಸ್ಲಿಮ್ ಮಹಿಳೆಯರು ಪ್ರಾರ್ಥನೆ ( ದುವಾ ) ಮಾಡಿದ್ದಾರೆ. ಬುರ್ಖಾ ಧಾರಿ ಮಹಿಳೆಯರ ಗೆಟಪ್ ನಲ್ಲಿ ಮಹಿಳೆಯರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಎಕ್ಸಿಟ್ ಪೋಲ್ ನಂತರ, ಬಿಜೆಪಿಯ ನೂತನ ಸರ್ಕಾರಕ್ಕಾಗಿ ಪ್ರಾರ್ಥನೆಯ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ನಗರದಿಂದ ವೀಡಿಯೋವೊಂದು ಹರಿದಾಡುತ್ತಿದ್ದು, ಮಹಿಳೆಯರೆಲ್ಲ ಬುರ್ಖಾ ಧರಿಸಿದ್ದಾರೆ. ಅಲ್ಲದೆ ತಲೆ ಮೇಲೆ ಕೇಸರಿ ಟೊಪ್ಪಿಗೆ ಹಾಕಿಕೊಂಡು ಪ್ರಾರ್ಥನೆ ಸಲ್ಲಿಸಿದ್ದಾರೆ.
ಅದರಲ್ಲಿ ಬುರ್ಖಾ ಧರಿಸಿ ಮುಸ್ಲಿಂ ಮಹಿಳೆಯರು ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸುತ್ತಿರುವುದು ಕಂಡುಬಂದಿದೆ.