ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ ಬೆಂಗಳೂರಿನ ಜೆಎಸ್ ಡಬ್ಲ್ಯೂ ಟೌನ್ ಶಿಪ್ ನಲ್ಲಿ ಆಯೋಜಿಸಿದ್ದ ‘ಯೋಗರತ್ನ’ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನೆರವೇರಿತು.
ಸಮಾರಂಭದಲ್ಲಿ ಶ್ವಾಸಯೋಗ ಪೀಠದ ಯೋಗ ಗುರು ಶ್ರೀ ವಚನಾನಂದ ಸ್ವಾಮೀಜಿ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸಮಾರಂಭದಲ್ಲಿ ಭಾಗವಹಿಸಿದ್ದ 50ಕ್ಕೂ ಹೆಚ್ಚಿನ ಸಿದ್ಧಗುರುಗಳು ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ‘ಯೋಗರಾಮಯ್ಯ ಮತ್ತು ಕರ್ಮಯೋಗಿರಾಮಯ್ಯ’ ಎಂದು ಪ್ರಶಂಸಿಸಿದರು.