ಲಕ್ಕಿ ಅಲಿ ಎಂದೇ ಖ್ಯಾತರಾಗಿರುವ ಗಾಯಕ ಮಕ್ಸೂದ್ ಎಂ ಅಲಿ ಅವರು ಭೂಕಬಳಿಕೆ ಆರೋಪದ ಮೇಲೆ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಕರ್ನಾಟಕ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
IAS ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಪತಿ ಸುಧೀರ್ ರೆಡ್ಡಿ ಮತ್ತು ಅವರ ಸೋದರ ಮಾವ ಮಧುಸೂಧನ್ ರೆಡ್ಡಿ ಅವರು ತಮ್ಮ ಕುಟುಂಬಕ್ಕೆ ಸೇರಿರುವ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸಲು ಸರ್ಕಾರಿ ಯಂತ್ರ ಮತ್ತು ಪ್ರಭಾವ ಬಳಸಿದ್ದಾರೆ ಎಂದು ಅಲಿ ಆರೋಪಿಸಿದ್ದಾರೆ.
ದೂರಿನಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಮಂಜುನಾಥ್ ಮತ್ತು ಸರ್ಕಾರಿ ಅಧಿಕಾರಿ ಮನೋಹರ್ ಅವರ ಹೆಸರೂ ಧಾಖಳಿಸಿದ್ದಾರೆ. ಈ ಕುರಿತು ಲಕ್ಕಿ ಅಲಿ ಸಾಮಾಜಿಕ ಜಾಲತಾಣಗಳಲ್ಲಿ ದೂರಿನ ಪ್ರತಿ ಹಂಚಿಕೊಂಡಿದ್ದಾರೆ.
ಅಲಿ ಅವರು ಡಿಸೆಂಬರ್ 2022 ರಲ್ಲಿ ಕರ್ನಾಟಕ ಪೊಲೀಸ್ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಭೂಕಬಳಿಕೆ ಆರೋಪಗಳನ್ನು ಮಾಡಿದ್ದರು. ಇದೀಗ ಲಕ್ಕಿ ಅಲಿ ಲೋಕಾಯುಕ್ತ ಮೆಟ್ಟಲು ಏರಿದ್ದಾರೆ.