ಮಾರಕ HIV ಪೀಡಿತರ ಸಂಖ್ಯೆ ಧಾರವಾಡ ಜಿಲ್ಲೆಯಲ್ಲಿ ಇಳಿಮುಖದತ್ತ ಸಾಗಿದೆ. ಭಯಾನಾಕ ಏಡ್ಸ್ ನಿಂದ ಬಳಲುತ್ತಿರುವವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಏಡ್ಸ್ ಬಗ್ಗೆ ಸಮಾಜದಲ್ಲಿ ತಿಳುವಳಿಕೆ ಕೊಡುವ ಕೆಲಸವು ನಡೆದಿದೆ.
2023 ರ ಅಂತ್ಯದಲ್ಲಿ , ಧಾರವಾಡ ಜಿಲ್ಲೆಯಲ್ಲಿ 276 HIV ಪ್ರಕರಣಗಳು ವರದಿಯಾಗಿವೆ.
2017-18ರಲ್ಲಿ ಧಾರವಾಡದಲ್ಲಿ 664 ಎಚ್‌ಐವಿ ಪ್ರಕರಣಗಳಿದ್ದವು. ಈ ಪ್ರಕರಣಗಳು ಕ್ರಮೇಣ ಕಡಿಮೆಯಾಗುತ್ತ ಬರುತ್ತಿವೆ.
ಜಿಲ್ಲಾ ಆರೋಗ್ಯ ಅಧಿಕಾರಿಗಳು ಎಚ್‌ಐವಿ ಹರಡುವಿಕೆಯನ್ನು ಎದುರಿಸಲು ಶ್ರಮಿಸುತ್ತಿದ್ದಾರೆ ಮತ್ತು ಅದರಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದರ ಪರಿಣಾಮ ನಿಟ್ಟುಸಿರು ಬಿಡುವಂತಾಗಿದೆ.
2030ರ ವೇಳೆಗೆ ದೇಶವನ್ನು ಏಡ್ಸ್ ಮುಕ್ತ ಮಾಡಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಗೆ ಅನುಗುಣವಾಗಿ ಜಿಲ್ಲೆಯನ್ನು ಮುಂದಿನ ಕೆಲವು ವರ್ಷಗಳಲ್ಲಿ ಏಡ್ಸ್ ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ.
