ಬಹುಕೋಟಿ ವಾಲ್ಮೀಕಿ ಹಗರಣದಲ್ಲಿ ಶಾಸಕ ಬಿ ನಾಗೇಂದ್ರರನ್ನು ED ವಶಕ್ಕೆ ಪಡೆದಿದೆ.
ಇಂದು ಬೆಂಗಳೂರಿನ ಅವರ ಮನೆಯಿಂದ ED ಅಧಿಕಾರಿಗಳು ನಾಗೇಂದ್ರರನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಕರೆ ತಂದಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಂತರ ರೂಪಾಯಿ ಹಣವನ್ನು ವಿವಿಧ 18 ಕಂಪನಿಗಳ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಬಯಲಾಗಿದ್ದು, ED ತನಿಖೆ ನಡೆಸಿದೆ. ಕಾಂಗ್ರೇಸ್ ಸರ್ಕಾರಕ್ಕೆ ವಾಲ್ಮೀಕಿ ಹಗರಣ ಮುಜುಗುರವುಂಟು ಮಾಡಲಿದ್ದು, ರಾಜಕೀಯ ಸಂಘರ್ಷಕ್ಕೆ ವಾಲ್ಮೀಕಿ ಹಗರಣ ಬಳಕೆಯಾಗಲಿದೆ