ನೌಕರರಿಗೆ ಕೆಲಸದಲ್ಲಿ ಮತ್ತಷ್ಟು ಹುರುಪು ತುಂಬಲು ಅಸ್ಸಾಂ ಸರ್ಕಾರ, ತನ್ನ ನೌಕರರಿಗೆ ಎರಡು ಸರ್ಕಾರಿ ರಜೆ ಘೋಷಣೆ ಮಾಡಿದೆ.
ತಂದೆ ತಾಯಿ / ಅತ್ತೆ ಮಾವನ ಜೊತೆ ಕಾಲ ಕಳೆಯಲು ನವೆಂಬರ್ 6 ರಿಂದ 8 ರ ವರೆಗೆ ಸರ್ಕಾರಿ ರಜೆ ನೀಡಲಾಗಿದೆ. ಎರಡು ದಿನಗಳ ಕಾಲ ನೀಡಲಿರುವ ರಜೆಯನ್ನು ಯಾವ ಕಾರಣಕ್ಕೆ ಕೊಟ್ಟಿದೆಯೋ ಅದೇ ಕಾರಣಕ್ಕೆ ಬಳಸಿಕೊಳ್ಳಬೇಕು ಎಂದು ಷರತ್ತು ವಿಧಿಸಲಾಗಿದೆ.
ವಯಸ್ಸಾದ ತಂದೆ ತಾಯಿ ಮತ್ತು ಅತ್ತೆ ಮಾವನನ್ನು ಅಕ್ಕರೆಯಿಂದ ನೋಡಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ವಿಶೇಷ ರಜೆ ನೀಡಿದೆ.