ಶಿಕ್ಷಣ, ಸಾಹಿತ್ಯ, ಸಂಗೀತ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಧಾರವಾಡದಲ್ಲಿ ಅತ್ಯಾಧುನಿಕ ಈಜುಗೋಳ ಹಾಗೂ ಕ್ರೀಡಾ ಸಂಕೀರ್ಣ ಸಿದ್ದವಾಗಿದೆ.
ಧಾರವಾಡದ ಡಿ ಸಿ ಕಾಂಪೌಂಡ್ ನಲ್ಲಿರುವ ಪಾಲಿಕೆಯ ಈಜುಗೋಳ ಇದೀಗ ಅಂತಾರಾಷ್ಟ್ರೀಯ ಸ್ವರೂಪ ಪಡೆದಿದೆ. ಶೇಕಡಾ 80 ರಷ್ಟು ಕಾಮಗಾರಿ ಮುಗಿದಿದೆ.
ಕಂಪನಿಗಳ ಸಾರ್ವಜನಿಕ ಹೊಣೆಗಾರಿಕೆ ನಿಧಿ ಬಳಸಿ ಧಾರವಾಡದ ಡಿ.ಸಿ.ಕಾಂಪೌಡ್ ಬಳಿ 15 ಕೋಟಿ ರೂ. ವೆಚ್ಚದಲ್ಲಿ ಈಜುಗೋಳ ನಿರ್ಮಿಸಲಾಗುತ್ತಿದೆ. ಇದನ್ನು ಮೇಲ್ದರ್ಜೆಗೇರಿಸಿ ಕ್ರೀಡಾ ಸಮುಚ್ಚಯವನ್ನಾಗಿಸುವದಾಗಿ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ತಿಳಿಸಿದ್ದಾರೆ.
ಇದಕ್ಕೆ ತಗಲುವ ಹೆಚ್ಚುವರಿ 15 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಸ್ವಾಮ್ಯದ ತೈಲ ಹಾಗೂ ನೈಸರ್ಗಿಕ ಅನಿಲ ಕಾರ್ಪೊರೇಷನ್ ನೀಡಿದೆ. ಕಡೆಗೂ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಕನಸಿನ ಯೋಜನೆ ಸಾಕಾರಗೊಂಡಿದ್ದು, ಇಷ್ಟರಲ್ಲಿಯೇ ಅತ್ಯಾಧುನಿಕ ಈಜುಗೋಳ ಲೋಕಾರ್ಪಣೆಗೊಳ್ಳಲಿದೆ.