ಇಂದಿನ ಜಮಾನಾದಲ್ಲಿ ಬರಿ ಇನ್ ಕಮಿಂಗ್ ರಾಜಕಾರಣಿಗಳೆ ಹೆಚ್ಚು, ಆದರೆ ಸಂತೋಷ್ ಲಾಡ್ ಇದಕ್ಕೆ ಅಪವಾದವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಲಾಡ್ ಇಂದು ಹುಬ್ಬಳ್ಳಿಯಲ್ಲಿ ” ಸಂತೋಷ ” ಹಂಚಿದರು.
ಹುಬ್ಬಳ್ಳಿಯಲ್ಲಿ ಸಂತೋಷ್ ಲಾಡ್ ಫೌಂಡೇಶನ್ ಹಮ್ಮಿಕೊಂಡಿದ್ದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ನಿರುದ್ಯೋಗಿ ಯುವಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ 106 ಇಲೆಕ್ಟ್ರಿಕ್ ಆಟೋ ನೀಡಲಾಯಿತು.
ಎಲ್ಲಾ ಧರ್ಮಗಳ ಧರ್ಮಗುರುಗಳ ಸಮ್ಮುಖದಲ್ಲಿ ಸಚಿವ ಸಂತೋಷ ಲಾಡ್, ಬಡತನದ ಬೇಗುದಿಯಲ್ಲಿರುವವರ ಕಣ್ಣೀರು ಒರೆಸುವ ಕೆಲಸ ಮಾಡಿದರು.
ಶ್ರೀಮಂತಿಕೆಯ ಅಹಂಕಾರ ಇಲ್ಲದೆ, ಸರಳ ಬದುಕು ಕಟ್ಟಿಕೊಂಡಿರುವ ಸಂತೋಷ್ ಲಾಡರ ಕಾರ್ಯಕ್ಕೆ ಧರ್ಮಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿ, ಮತ್ತು ವಿಧ್ಯಾರ್ಥಿಗಳಿಗೆ ಲ್ಯಾಪಟಾಪ್ ನೀಡಿದರು. ಸಮಾರಂಭದಲ್ಲಿ ಶಾಸಕರು, ಸೇರಿದಂತೆ ಸಾವಿರಾರು ಜನ ಆರ್ಥಪೂರ್ಣ ಸಮಾರಂಭಕ್ಕೆ ಸಾಕ್ಷಿಯಾದರು.