ಸೋಮವಾರದಿಂದ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಧಾರವಾಡಕ್ಕೆ ಪ್ರತ್ತೈಕ ಪಾಲಿಕೆ ಕುರಿತು ದ್ವನಿ ಎತ್ತುವದಾಗಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.
ಕರ್ನಾಟಕ ಫೈಲ್ಸ್ ಜೊತೆ ಮಾತನಾಡಿದ ಅವರು, ಪ್ರತ್ತೈಕ ಪಾಲಿಕೆ ಆಗಬೇಕೆನ್ನುವದಕ್ಕೆ ನನ್ನ ಸಹಮತವು ಇದೆ. ಆಡಳಿತ ಸುಗಮವಾಗಲು, ನಗರ ಅಭಿವೃದ್ಧಿ ಹೊಂದಲು ಪ್ರತ್ತೈಕ ಪಾಲಿಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನನ್ನ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.