ಧಾರವಾಡದ ಹೊಸ ಬಸ್ ನಿಲ್ದಾಣದ ಹಿಂದೆ ಕಳೆದ 10 ವರ್ಷಗಳಿಂದ ನಡೆದಿರುವ ಗಾಂಧೀ ಭವನ ಕಾಮಗಾರಿ ಕುರಿತಂತೆ ಸುದ್ದಿ ಪ್ರಕಟಿಸಿದ್ದ ಕರ್ನಾಟಕ ಫೈಲ್ಸ್ ಗೆ ಮತ್ತೊಂದು ಜಯ ಸಿಕ್ಕಿದೆ.
ಗಾಂಧೀ ಭವನದ ಸುದ್ದಿ ಫಲಪ್ರದವಾಗಿದ್ದು, ಅಕ್ಟೋಬರ್ 2 ರಂದು ಗಾಂಧೀ ಭವನ ಉದ್ಘಾಟನೆ ಮಾಡಲು ಆಡಳಿತ ನಿರ್ಣಯಿಸಿದೆ.
29 ಗುಂಟೆಯಲ್ಲಿ ಮೂರು ಕೋಟಿ ವೆಚ್ಚದಲ್ಲಿ ಗಾಂಧೀ ಭವನ ನಿರ್ಮಾಣ ಮಾಡಲಾಗುತ್ತಿದ್ದು, 10 ವರ್ಷಗಳಿಂದ ಕಟ್ಟಡ ಕಟ್ಟುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಫೈಲ್ಸ್ ನಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಎಚ್ಚರಗೊಂಡ ವಾರ್ತಾ ಇಲಾಖೆ ಅಧಿಕಾರಿ ಮಂಜುನಾಥ ಸುಳ್ಳೋಳ್ಳಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇನ್ನು ಹದಿನೈದು ದಿನಗಳಲ್ಲಿ ಉಳಿದ ಕೆಲಸ ಮುಗಿಸುವದಾಗಿ ಲ್ಯಾಂಡ್ ಆರ್ಮಿ ಅಧಿಕಾರಿಗಳು ಹೇಳಿದ್ದು, ಅಕ್ಟೋಬರ್ 2 ರಂದು ಗಾಂಧೀ ಭವನ ಉದ್ಘಾಟನೆ ಮಾಡುವದಾಗಿ ಅಧಿಕಾರಿಗಳು ಕರ್ನಾಟಕ ಫೈಲ್ಸ್ ಗೆ ತಿಳಿಸಿದ್ದಾರೆ.