ಧಾರವಾಡ ಜಿಲ್ಲೆಯ ಹೆಮ್ಮೆಯ ಕುಸ್ತಿಪಟು ಆಗಿದ್ದ, ಕರಡಿಕೊಪ್ಪ ಗ್ರಾಮದ ಉಸ್ತಾದ ಫಕ್ಕೀರಪ್ಪ ಪೈಲ್ವಾನ ಇಂದು ಅಕಾಲಿಕ ನಿಧನ ಹೊಂದಿದರು.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕುಸ್ತಿ ಆಡುವ ಮೂಲಕ ಹೆಸರು ಮಾಡಿದ್ದ ಫಕೀರಪ್ಪ ಪೈಲ್ವಾನ್, ಕುಸ್ತಿ ಪಟುಗಳನ್ನು ತಯಾರು ಮಾಡುತ್ತಿದ್ದರು. ಫಕೀರಪ್ಪ ಪೈಲ್ವಾನರ ನಿಧನಕ್ಕೆ ಪಿ ಎಚ್ ನೀರಲಕೇರಿ, ಬಸವರಾಜ ಮಲಕಾರಿ ಸೇರಿದಂತೆ ಅನೇಕ ಕುಸ್ತಿ ಪ್ರೇಮಿಗಳು ಹಾಗೂ ಕುಸ್ತಿ ಪಟುಗಳು ಕಂಬನಿ ಮಿಡಿದಿದ್ದಾರೆ.