ರಾಜ್ಯದಲ್ಲಿ ಪಶು ವೈದ್ಯರ ಕೊರತೆಯನ್ನು ನೀಗಿಸಲು ಶೀಘ್ರದಲ್ಲಿಯೇ 400 ಮಂದಿ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಜೊತೆಗೆ ಪಶು ಚಿಕಿತ್ಸಾಲಯಗಳಿಗೆ ಕಟ್ಟಡ ಕೊರತೆ ನೀಗಿಸಲು ರಾಜ್ಯಾದ್ಯಂತ 200 ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿರುವ ಅವರು ಸರ್ಕಾರ ಪಶುಸಂಗೋಪನೆಗೆ ಹೆಚ್ಚು ಒತ್ತು ಕೊಟ್ಟಿದೆ ಎಂದಿದ್ದಾರೆ.