ರಾಜ್ಯದಾಧ್ಯಂತ ಭಾರಿ ಸುದ್ದಿ ಮಾಡಿದ್ದ ಮಾಂಸದ ಕುರಿತಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಂತ್ಯಕಂಡಿದೆ.
ದಿನಾಂಕ 26 ರಂದು ಸಂಜೆ ವೇಳೆಗೆ ಬೆಂಗಳೂರು ನಗರಕ್ಕೆ ರೈಲುಗಳ ಮುಖಾಂತರ ರಾಜಸ್ಥಾನದಿಂದ ಮಾಂಸವು ಸರಬರಾಜು ಆಗುತ್ತಿರುವ ಕುರಿತಂತೆ ಹಿಂದು ಸಂಘಟನೆಯವರು ಇದು ಕುರಿ ಮಾಂಸ ಅಲ್ಲ, ನಾಯಿ ಮಾಂಸ ಎಂದು ಪ್ರತಿಭಟನೆ ನಡೆಸಿದ್ದರು.
ಪ್ರಕರಣದ ಗಂಭೀರತೆ ಅರಿತ ಸರ್ಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯವರು ತಪಾಸಣೆ ಮಾಡಿದ್ದರು.
ಒಟ್ಟು 84 ಪೆಟ್ಟಿಗೆಯಲ್ಲಿ ಮಾಂಸದ ಪಾರ್ಸೆಲ್‌ಗಳಿದ್ದು ಅವುಗಳ ಮಾದರಿಯನ್ನು ವಿಶ್ಲೇಷಣೆಗಾಗಿ ಹೈದ್ರಾಬಾದ್‌ನಲ್ಲಿರುವ ICAR, ಗೆ ಕಳಿಸಲಾಗಿತ್ತು.
ಇದೀಗ ಸರ್ಕಾರಿ ಪ್ರಯೋಗಾಲಯದ ವರದಿ ಬಂದಿದ್ದು, ಪ್ರಯೋಗಾಲಯಗಳಿಂದ ಪರೀಕ್ಷಾ ವರದಿ ಬಂದಿದ್ದು ರಾಜಸ್ಥಾನದಿಂದ ಬಂದ ಮಾಂಸವು ‘ಕುರಿ’ಯದ್ದೇ ಆಗಿದೆ ಎಂಬುದನ್ನು ಪ್ರಯೋಗಾಲಯವು ಖಚಿತಪಡಿಸಿದೆ.