ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತದ ನಂತರ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯ ನಡುವೆ ದುರಂತ ಬೆಳವಣಿಗೆ ನಡೆದಿದೆ.
ಚೂರಲ್ಮಲಾದಲ್ಲಿ ದಿವ್ಯಾ ಮತ್ತು ಅವರ ಮಗ ಲಕ್ಷ್ಮೀತ್ ಎಂದು ಗುರುತಿಸಲಾದ ಇಬ್ಬರು ಕನ್ನಡಿಗರ ಶವಗಳು ಪತ್ತೆಯಾಗಿವೆ.
ಭಾರತೀಯ ಸೇನೆ ಹಾಗೂ ಎನ್ ಡಿ ಆರ್ ಎಫ್ ಸೇರಿದಂತೆ ಸ್ವಯಂ ಸೇವಕರು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
