ಆಗಸ್ಟ್ 12 ರಂದು ಕರ್ನಾಟಕದ ಮೂಡುಬಿದಿರೆಯ ಕಾಲೇಜೊಂದರಲ್ಲಿ ತನ್ನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕೆ ಯುವಕನೊಬ್ಬ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಕತ್ತರಿಯಿಂದ ಇರಿದ ಆಘಾತಕಾರಿ ಘಟನೆ ನಡೆದಿದೆ.
ಆರೋಪಿ ತುಮಕೂರು ಮೂಲದ ಮಂಜುನಾಥ್, ಸಂತ್ರಸ್ತೆಯ ಮಾಜಿ ಸಹಪಾಠಿಯಾಗಿದ್ದಾನೆ. ತನ್ನ ಅಧ್ಯಯನವನ್ನು ನಿಲ್ಲಿಸಿ ತುಮಕೂರಿಗೆ ಹಿಂದಿರುಗಿದರೂ, ಮಂಜುನಾಥ್ ಹುಡುಗಿಗೆ ಸಂದೇಶಗಳನ್ನು ಕಳುಹಿಸುವುದನ್ನು ಮುಂದುವರೆಸಿದ್ದ.
ಮಂಜುನಾಥನ ಪ್ರೇಮ ಪ್ರಸ್ತಾಪವನ್ನು ಅವಳು ನಿರ್ಲಕ್ಷಿಸಿದ್ದಳು. ಮಂಜುನಾಥ ತನ್ನನ್ನು ಭೇಟಿಯಾಗಲು ಹೇಳಿದ್ದ. ಆದರೆ ಅವಳು ನಿರಾಕರಿಸಿದ್ದಳು.
ಆಕೆ ನಿರಾಕರಿಸಿದ್ದರಿಂದ ಕೋಪಗೊಂಡ ಮಂಜುನಾಥ ಮೂಡುಬಿದಿರೆಗೆ ತೆರಳಿ ತರಗತಿಯಲ್ಲಿದ್ದಾಗ ಯುವತಿಯ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ.
ಇಷ್ಟಾಗುತ್ತಿದ್ದಂತೆ ಸಹ ವಿದ್ಯಾರ್ಥಿಗಳು ಮಂಜುನಾಥನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
