ವಿಶ್ವವನ್ನೇ ನಡುಗಿಸಿದ್ದ ಕೊರೋನಾ ನಂತರ ಮತ್ತೊಂದು ಮಹಾಮಾರಿ ವೈರಸ್ ಜಗತ್ತನ್ನು ತಲ್ಲಣಗೊಳಿಸಿದೆ.
MPOX ಹೆಸರಿನ ವೈರಸ್ ಜಗತ್ತಿನ 116 ದೇಶಗಳಲ್ಲಿ ಹಬ್ಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ.
ವಿಶ್ವ ಆರೋಗ್ಯಸಂಸ್ಥೆ, ವಿಶ್ವ ಆರೋಗ್ಯ ತುರ್ತು ಸ್ಥಿತಿ ಘೋಷಿಸಿದೆ.
ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ. ಟೆಡ್ರೋಸ್ ಅವರು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (DRC) ಮತ್ತು ಆಫ್ರಿಕಾದಲ್ಲಿ ಹೆಚ್ಚುತ್ತಿರುವ ದೇಶಗಳಲ್ಲಿ mpox ನ ಉಲ್ಬಣವು ಅಂತರರಾಷ್ಟ್ರೀಯ ಆರೋಗ್ಯ ನಿಯಮಗಳ ಅಡಿಯಲ್ಲಿ ಅಂತರರಾಷ್ಟ್ರೀಯ ಕಾಳಜಿಯ (PHEIC) ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸುವ ಅನಿವಾರ್ಯತೆ ಬಗ್ಗೆ ಹೇಳಿದ್ದಾರೆ.
ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯು ಅಂತರರಾಷ್ಟ್ರೀಯ ಆರೋಗ್ಯ ಕಾನೂನಿನಡಿಯಲ್ಲಿ ಅತ್ಯುನ್ನತ ಮಟ್ಟದ ಎಚ್ಚರಿಕೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
13 ದೇಶಗಳಲ್ಲಿ ಈಗಾಗಲೇ MPOX ವೈರಸ್ ಗಳು ಪತ್ತೆಯಾಗಿದ್ದು, ಇನ್ನಿತರ ದೇಶಗಳಿಗೆ ಈ ವೈರಸ್ ಹಬ್ಬುತ್ತಿದೆ. ಈ ಹೊಸ ರೂಪದ ವೈರಸ್ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಯುದ್ದೋಪಾದಿಯಲ್ಲಿ ಕೆಲಸ ಮಾಡುತ್ತಿದೆ.
ಅರ್ಪಣ ಸುದ್ದಿ ಸಂಸ್ಥೆಯ ವರದಿ ಮಾಡಿದಂತೆ ಭಾರತದಲ್ಲಿ 2022 ರಿಂದ ಇಲ್ಲಿಯವರೆಗೆ 27 ಪ್ರಕರಣಗಳು ಪತ್ತೆಯಾಗಿದ್ದು, ಈ ವೈರಸ್ ಗೆ ಒಂದು ಬಲಿಯಾಗಿದೆ ಎಂದು ಅದು ಹೇಳಿದೆ.
ರೋಗ ಲಕ್ಷಣಗಳು
ಪುರುಷ ಮತ್ತು ಮಹಿಳೆಯರ ನಡುವೆ ನಿಕಟ ಸಂಪರ್ಕದ ಮೂಲಕ ಹರಡಬಹುದು ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಸೌಮ್ಯ, ಅಪರೂಪದ ಸಂದರ್ಭಗಳಲ್ಲಿ ಇದು ಮಾರಣಾಂತಿಕವಾಗಿದೆ ಎಂದು ಹೇಳಲಾಗಿದೆ. ಇದು ಜ್ವರ ತರಹದ ರೋಗಲಕ್ಷಣಗಳನ್ನು ಮತ್ತು ದೇಹದ ಮೇಲೆ ಕೀವು ತುಂಬಿದ ಗಾಯಗಳನ್ನು ಉಂಟುಮಾಡುತ್ತದೆ ಎಂದು ಪರೀಕ್ಷಾ ವರದಿಯಿಂದ ಗೊತ್ತಾಗಿದೆ.